ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಎಂಬ ಆಸೆ ಆಗುತ್ತದೆ. ಸುಲಭವಾಗಿ ಮನೆಯಲ್ಲಿಯೇ ಜೀರಾ ಬಿಸ್ಕೇಟ್ ಮಾಡಿಕೊಂಡು ಸವಿಯಿರಿ.
100 ಗ್ರಾಂ ಬೆಣ್ಣೆ, 50 ಗ್ರಾಂ ಐಸ್ಸಿಂಗ್ ಸಕ್ಕರೆ, ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣದ ಹದ ಬೆಣ್ಣೆಯಂತೆ ಆಗಲಿ. ನಂತರ ಇದಕ್ಕೆ ½ ಟೀ ಸ್ಪೂನ್ ಉಪ್ಪು, 1 ಟೇಬಲ್ ಸ್ಪೂನ್ ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ½ ಟೀ ಸ್ಪೂನ್ ಬೇಕಿಂಗ್ ಪೌಡರ್ ಹಾಕಿ. ನಂತರ 150 ಗ್ರಾಂ ಮೈದಾ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಸ್ವಲ್ಪ ದಪ್ಪಕ್ಕೆ ಲಟ್ಟಿಸಿಕೊಳ್ಳಿ.
ನಂತರ ಇದನ್ನು ವೃತ್ತಾಕಾರದಲ್ಲಿ ಕಟ್ ಮಾಡಿಕೊಳ್ಳಿ. ಇದನ್ನು ½ ಗಂಟೆಗಳ ಕಾಲ ಫ್ರೀಜರ್ ನಲ್ಲಿಡಿ. ನಂತರ ಒಂದು ಅಲ್ಯುಮಿನಿಯಂ ಪಾತ್ರೆಯ ತಳಭಾಗಕ್ಕೆ ಪುಡಿ ಉಪ್ಪು ಹಾಕಿ ಒಂದು ಚಿಕ್ಕ ಪ್ಲೇಟ್ ಅದರ ತಳಭಾಗಕ್ಕೆ ಬಿಡಿ. ನಂತರ ಫ್ರೀಜರ್ ನಲ್ಲಿದ್ದ ಈ ಬಿಸ್ಕೆಟ್ ಅನ್ನು ಫ್ರೀ ಹಿಟ್ ಮಾಡಿಟ್ಟುಕೊಂಡಿದ್ದ ಅಲ್ಯುಮಿನಿಯಂ ಪಾತ್ರೆಯ ಮೇಲೆ ಇಟ್ಟು ಒಂದು ಪ್ಲೇಟ್ ಮುಚ್ಚಿ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ರುಚಿಕರವಾದ ಜೀರಾ ಬಿಸ್ಕೇಟ್ ಈಗ ರೆಡಿ.