ಬೇಕಾಗುವ ಪದಾರ್ಥಗಳು : ಗೋಡಂಬಿ- 1 ಕಪ್, ಬಾದಾಮಿ- 1 ಕಪ್, ಒಣದ್ರಾಕ್ಷಿ- 1 ಕಪ್, ಒಣಕೊಬ್ಬರಿ ತುರಿ- 1/2 ಕಪ್, ಏಲಕ್ಕಿ ಪುಡಿ- 1 ಚಮಚ, ಹಸಿ ಖರ್ಜುರ- ಒಂದೂವರೆ ಕಪ್, ಗಸಗಸೆ 1/4 ಕಪ್.
ಮಾಡುವ ವಿಧಾನ : ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಖರ್ಜೂರ ಇವೆಲ್ಲವನ್ನೂ 1 ಚಮಚ ತುಪ್ಪದೊಂದಿಗೆ ಬೇರೆ ಬೇರೆಯಾಗಿ ಸಣ್ಣ ಉರಿಯಲ್ಲಿ ಹುರಿದು ಇಟ್ಟುಕೊಳ್ಳಬೇಕು. ಗಸಗಸೆ ಮತ್ತು ಒಣಕೊಬ್ಬರಿಯನ್ನು ಹುರಿಯಬೇಕು.
ಹುರಿದಿಟ್ಟುಕೊಂಡಿರುವ ಸಾಮಗ್ರಿಗಳು ಆರಿದ ಮೇಲೆ ಬೇರೆ ಬೇರೆಯಾಗಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಎಲ್ಲವನ್ನೂ ಬೆರೆಸಿಕೊಂಡು ಅದರ ಜೊತೆಗೆ ಏಲಕ್ಕಿ ಪುಡಿ ಮತ್ತು 1 ಚಮಚ ತುಪ್ಪವನ್ನು ಬೆರೆಸಿ ಉಂಡೆಗಳನ್ನಾಗಿ ಕಟ್ಟಿದರೆ, ಡ್ರೈ ಫ್ರೂಟ್ಸ್ ಲಾಡು ರೆಡಿಯಾಗುತ್ತದೆ.
ಇವು ಬೆಲ್ಲ ಅಥವ ಸಕ್ಕರೆ ಉಪಯೋಗಿಸದೆ ತಯಾರಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಮತ್ತು ಮಕ್ಕಳು ಕೂಡಾ ಇಷ್ಟಪಟ್ಟು ತಿನ್ನುತ್ತಾರೆ.