ಮನೆಯಲ್ಲೇ ಇರುವ ವಸ್ತು ಬಳಸಿ ತಯಾರಿಸಿ ನೈಸರ್ಗಿಕ ಸ್ಕ್ರಬ್​

ತ್ವಚೆಯ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು ಅಂದರೆ ಆರೈಕೆಯನ್ನೂ ಅಷ್ಟೇ ಚೆನ್ನಾಗಿ ಮಾಡಬೇಕು. ಅದರಲ್ಲೂ ಹದಿ ಹರೆಯದಲ್ಲಿ ಮೊಡವೆ ಸಮಸ್ಯೆ ಕಾಡೋದ್ರಿಂದ ನೀವು ಈ ವಯಸ್ಸಿನಲ್ಲಿ ತ್ವಚೆಯ ಆರೋಗ್ಯವನ್ನ ಸರಿಯಾಗಿ ನೋಡಿಕೊಂಡರೆ ಮುಂದಿನ ದಿನಗಳಲ್ಲಿ ನಿಮ್ಮ ತ್ವಚೆ ಕಾಂತಿಯುತವಾಗಿ ಇರಲಿದೆ. ಇದಕ್ಕಾಗಿ ಮನೆಯಲ್ಲೇ ಇರುವ ವಸ್ತುಗಳನ್ನ ಬಳಸಿ ನೀವು ನೈಸರ್ಗಿಕ ಸ್ಕ್ರಬ್​ನ್ನು ತಯಾರಿಸಬಹುದು.

ಜೇನುತುಪ್ಪ & ಚೆರ್ರಿಯ ಫೇಸ್​ ಸ್ಕ್ರಬ್​ :

ಬೇಕಾಗುವ ಸಾಮಗ್ರಿ : 5 ಚೆರ್ರಿ, 1 ಆಲ್ಮಂಡ್​ ಪುಡಿ, 1/4 ಕಪ್​ ಜೇನುತುಪ್ಪ, 1 ಟೇಬಲ್​ ಸ್ಪೂನ್​​ ಸಕ್ಕರೆ, 3 ಟೇಬಲ್​ ಸ್ಪೂನ್​ ಮೊಸರು
ಈ ಎಲ್ಲಾ ಪದಾರ್ಥಗಳನ್ನ ಮಿಕ್ಸ್ ಮಾಡಿ ಮುಖಕ್ಕೆ 30 ಸೆಕೆಂಡ್​ಗಳ ಕಾಲ ಮಸಾಜ್​ ಮಾಡಿ. ಬಳಿಕ ಮುಖವನ್ನ ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ.

ಕಿವಿ ಹಣ್ಣಿನ ಸ್ಕ್ರಬ್​ :

ಬೇಕಾಗುವ ಸಾಮಗ್ರಿ : 1 ಕಿವಿ ಹಣ್ಣು, 2 ಟೇಬಲ್​ ಸ್ಪೂನ್​​ ಬ್ರೌನ್​ ಶುಗರ್, ಆಲಿವ್​ ಎಣ್ಣೆ ಸ್ವಲ್ಪ

ಮಾಡುವ ವಿಧಾನ : ಈ ಎಲ್ಲಾ ಪದಾರ್ಥಗಳನ್ನ ಮಿಶ್ರಣ ಮಾಡಿ. ವೃತ್ತಾಕಾರ ವಿಧಾನದಲ್ಲಿ 5 ನಿಮಿಷಗಳ ಕಾಲ ಮಸಾಜ್​ ಮಾಡಿ. ಬೆಚ್ಚನೆಯ ನೀರಿನಲ್ಲಿ ಮುಖವನ್ನ ತೊಳೆದುಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read