ಮನೆಯ ಯಜಮಾನಿಯನ್ನು ಆ ಮನೆಯ ಗೃಹಲಕ್ಷ್ಮಿ, ಅದೃಷ್ಟಲಕ್ಷ್ಮಿ ಎಂದು ಕರೆಯುತ್ತಾರೆ. ಹಾಗಾಗಿ ಮನೆಯಲ್ಲಿರುವ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗಿ ಮನೆಯಲ್ಲಿ ಲಕ್ಷ್ಮಿದೇವಿ ನೆಲೆ ನಿಲ್ಲಲು ಮನೆಯ ಯಜಮಾನಿ ಮನೆಯಿಂದ ಹೊರಗೆ ಹೋಗುವಾಗ ಅಥವಾ ಮನೆಯೊಳಗೆ ಬರುವಾಗ ಹೊಸ್ತಿಲ ಬಳಿ ಈ ಕೆಲಸವನ್ನು ಮಾಡಬೇಕು.
ಮನೆಯ ಹೊಸ್ತಿಲಿಗೆ ಮಹತ್ವದ ಸ್ಥಾನವನ್ನು ನೀಡುತ್ತೇವೆ. ಮನೆಯ ಹೊಸ್ತಿಲಿನಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ. ಹಾಗಾಗಿ ಹೊಸ್ತಿಲನ್ನು ತುಳಿಯಬಾರದು ಎಂದು ಹೇಳುತ್ತಾರೆ. ಒಂದು ವೇಳೆ ಹೊಸ್ತಿಲಿಗೆ ತುಳಿದರೆ ಅವಮಾನದಿಂದ ಲಕ್ಷ್ಮಿದೇವಿ ಮನೆಯನ್ನು ತೊರೆಯುತ್ತಾಳೆ ಎನ್ನುತ್ತಾರೆ.
ಆದಕಾರಣ ನಾವು ದೇವಸ್ಥಾನಕ್ಕೆ ಹೋದಾಗ ಹೇಗೆ ದೇವಾಲಯದ ಬಾಗಿಲ ಹೊಸ್ತಿಲನ್ನು ಮುಟ್ಟಿ ನಮಸ್ಕಾರ ಮಾಡಿ ಒಳಗೆ ಹೊರಗೆ ಹೋಗುತ್ತೇವೋ ಹಾಗೆ ಮನೆಯ ಹೊರಗೆ – ಒಳಗೆ ಹೋಗುವಾಗ ಗೃಹಿಣಿ ಹೊಸ್ತಿಲನ್ನು ಮುಟ್ಟಿ ನಮಸ್ಕಾರ ಮಾಡಬೇಕು. ಇದರಿಂದ ಲಕ್ಷ್ಮಿದೇವಿಯ ಅನುಗ್ರಹ ದೊರೆತು ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆಯಂತೆ.