ವಾಸ್ತು ಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಲಾಗುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಇಡಲಾಗುತ್ತದೆ. ಮನೆಗಳಲ್ಲಿ ಮೀನುಗಳನ್ನು ಇಡುವುದು ತುಂಬಾ ಶುಭ. ಚೀನೀ ವಾಸ್ತು ಶಾಸ್ತ್ರ ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಮೀನುಗಳನ್ನು ಇಡುವುದರಿಂದ ಸಂತೋಷ ಮತ್ತು ಶಾಂತಿ ಹೆಚ್ಚಾಗುತ್ತದೆ.
ಮನೆಯಲ್ಲಿ ಅಕ್ವೇರಿಯಂ ಇಡುವಾಗ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮನೆಯಲ್ಲಿ ಬಣ್ಣ ಬಣ್ಣದ ಮೀನುಗಳಿರುತ್ತವೆ. ಇವು ಸಕಾರಾತ್ಮಕ ಶಕ್ತಿ ನೆಲೆಸಲು ನೆರವಾಗುತ್ತದೆ. ಬಣ್ಣದ ಮೀನುಗಳು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಫೆಂಗ್ ಶೂಯಿ ಪ್ರಕಾರ ಮನೆಯಲ್ಲಿ ಬಣ್ಣದ ಮೀನುಗಳಿದ್ದರೆ ಅವು ಒತ್ತಡವನ್ನು ಕಡಿಮೆ ಮಾಡುತ್ತವೆ.
ಮನೆಯಲ್ಲಿ ಅಕ್ವೇರಿಯಂ ಇಡುವಾಗ ದಿಕ್ಕಿನ ಬಗ್ಗೆ ಗಮನ ನೀಡಬೇಕು. ಹಣದ ಲಾಭಕ್ಕಾಗಿ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಮನೆಯ ದಕ್ಷಿಣ ದಿಕ್ಕಿನಲ್ಲಿ ಎಂದೂ ಅಕ್ವೇರಿಯಂ ಇಡಬಾರದು. ಅಕ್ವೇರಿಯಂನಲ್ಲಿ 9 ಮೀನುಗಳಿರಬೇಕು. ಬೇರೆ ಬೇರೆ ಬಣ್ಣದ ಮೀನುಗಳಿರಬೇಕು. ಅದ್ರಲ್ಲಿ ಒಂದು ಕಪ್ಪು ಬಣ್ಣದ ಮೀನುಗಳಿರಬೇಕು.