ಪೋಷಕಾಂಶ ಭರಿತ ಆಹಾರಗಳನ್ನು ಮಕ್ಕಳಿಗೆ ನೀಡುವುದು ನಿಜಕ್ಕೂ ಸವಾಲಿನ ಕೆಲಸವೇ? ಉತ್ತಮ ಆಹಾರಗಳು ಮಕ್ಕಳ ಬಾಯಿಗೆ ರುಚಿಸುವುದಿಲ್ಲ. ಜಂಕ್ ಫುಡ್ ಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ ಅದರೆ ಇದರಿಂದ ಆರೋಗ್ಯಕ್ಕೆ ಹಾನಿ. ಹಾಗಾದರೆ ಮಕ್ಕಳಿಗೆ ಆರೋಗ್ಯಕರ ಆಹಾರಗಳನ್ನು ನೀಡುವುದು ಹೇಗೆ?
ಮಕ್ಕಳಿನ ಮೆದುಳನ್ನು ಚುರುಕುಗೊಳಿಸುವ ಆಹಾರಗಳನ್ನು ಅವರಿಗೆ ನಿತ್ಯ ಕೊಡಿ. ಇದರಲ್ಲಿ ಮೊದಲನೆಯದು ಮೊಟ್ಟೆ. ಇದರಲ್ಲಿ ವಿಟಮಿನ್, ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಧಾರಾಳವಾಗಿದ್ದು ಇದು ಮೆದುಳಿನ ವಿಕಸನಕ್ಕೆ ಅತ್ಯವಶ್ಯಕ. ಇದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚುತ್ತದೆ.
ಸಂಶೋಧನೆಯ ಪ್ರಕಾರ ಮಕ್ಕಳ ಮೆದುಳಿನ ವಿಕಸನಕ್ಕೆ ಹಾಲಿಗಿಂತ ಮೊಸರು ಬಹಳ ಒಳ್ಳೆಯದು. ಮೊಸರು ತಿನ್ನುವುದರಿಂದ ಮೆದುಳಿನ ಕೋಶಗಳ ನಿರ್ವಹಣೆ ಸುಲಭವಾಗುತ್ತದೆ.
ಒಮೆಗಾ 3 ಅಂಶ ಧಾರಾಳವಾಗಿರುವ ಮೀನು ಮಕ್ಕಳಿಗೆ ಕೊಡಿ. ಡ್ರೈಫ್ರುಟ್ ತಿನ್ನಿಸಿ. ಗೋಡಂಬಿ, ಒಣದ್ರಾಕ್ಷಿ, ಬಾದಾಮಿಗಳ ಪೈಕಿ ಒಂದನ್ನು ನಿತ್ಯ ಕೊಡುತ್ತಾ ಬನ್ನಿ. ಚೆರ್ರಿ, ಸ್ಟ್ರಾಬೆರಿ ಹೊರತಾಗಿ ಆಯಾ ಸೀಸನ್ ನಲ್ಲಿ ಸಿಗುವ ಹಣ್ಣುಗಳನ್ನು ಮಕ್ಕಳಿಗೆ ತಿನ್ನಿಸಿ.