ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಶಕುನ ಶಾಸ್ತ್ರದಲ್ಲಿ ಕೆಲವು ವಿಷಯಗಳನ್ನು ಹೇಳಲಾಗಿದೆ. ಪ್ರಾಣಿಗಳ ಅಳು ಕೂಡ ಶಕುನ ಶಾಸ್ತ್ರಕ್ಕೆ ಸಂಬಂಧಿಸಿದೆ. ಎಷ್ಟೋ ಬಾರಿ ಮನೆಯ ಹೊರಗಿನಿಂದ ಬೆಕ್ಕಿನ ಕೂಗು ಕೇಳಿಬರುತ್ತದೆ ಮತ್ತು ಅದನ್ನು ಅಪಶಕುನವೆಂದು ಪರಿಗಣಿಸಿ ಓಡಿಸುತ್ತೇವೆ. ಆದರೆ ಶಕುನ ಶಾಸ್ತ್ರದಲ್ಲಿ ಇದನ್ನು ಯಾವ ರೀತಿ ಪರಿಗಣಿಸಲಾಗಿದೆ ಎಂಬುದನ್ನು ತಿಳಿಯೋಣ. ಶಕುನ ಶಾಸ್ತ್ರದ ಪ್ರಕಾರ ಮನೆಯ ಹೊರಗೆ ಬೆಕ್ಕು ಅಳುವುದು ಒಳ್ಳೆಯದಲ್ಲ.
ಈ ರೀತಿ ಮಾಡುವ ಮೂಲಕ ಬೆಕ್ಕು ಕೆಲವು ಅಹಿತಕರ ಘಟನೆಯನ್ನು ಸೂಚಿಸುತ್ತದೆ ಎಂಬ ನಂಬಿಕೆ ಇದೆ. ಬೆಕ್ಕು ಅಳುವುದು ಮನೆಯ ಸದಸ್ಯರಿಗೆ ಎದುರಾಗಲಿರುವ ಗಂಡಾಂತರದ ಸಂಕೇತವೆಂದು ಹೇಳಲಾಗುತ್ತದೆ. ಶಾಸ್ತ್ರದ ಪ್ರಕಾರ ಮನೆಯ ಹೊರಗೆ ಬೆಕ್ಕು ಅಳುವುದು, ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವ ಸಂಕೇತವಾಗಿದೆ. ಬೆಕ್ಕು ಭವಿಷ್ಯದ ಘಟನೆಗಳನ್ನು ಗ್ರಹಿಸಬಲ್ಲದು. ಹಾಗಾಗಿ ಬೆಕ್ಕು ಅಳುತ್ತಿದ್ದರೆ ಅದನ್ನು ಅಲ್ಲಿಂದ ಓಡಿಸುವುದು ಉತ್ತಮ.
ಮನೆಯ ಹೊರಗೆ ಎರಡು ಬೆಕ್ಕುಗಳು ಪರಸ್ಪರ ಜಗಳವಾಡುತ್ತಿದ್ದರೆ ಅದು ಆ ಮನೆಯಲ್ಲಿ ಹಣದ ನಷ್ಟ ಮತ್ತು ಅಪಶ್ರುತಿಯ ಸಂಕೇತವಾಗಿದೆ. ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಶಕುನ ಶಾಸ್ತ್ರದ ಪ್ರಕಾರ ಎಲ್ಲಾದರೂ ಹೋಗುವ ಸಂದರ್ಭದಲ್ಲಿ ಬೆಕ್ಕು ಅಡ್ಡಬಂದರೆ, ರಸ್ತೆ ದಾಟಿದರೆ ಅದು ಕೂಡ ಕೆಟ್ಟ ಶಕುನವೆಂದು ಹೇಳಲಾಗುತ್ತದೆ. ಬೆಕ್ಕು ಎಡಭಾಗದಿಂದ ರಸ್ತೆ ದಾಟುವುದು ಅಶುಭವೆಂದು ಪರಿಗಣಿಸಲಾಗಿದೆ.
ಇದರಿಂದ ನೀವು ಹೊರಟಿರುವ ಕೆಲಸವು ನೆರವೇರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಕ್ಕು ಮನೆಗೆ ನುಗ್ಗಿ ಅಡುಗೆ ಮನೆಯಲ್ಲಿಟ್ಟ ಹಾಲನ್ನು ಕುಡಿದರೆ ಅದು ಮನೆಯಲ್ಲಿನ ಸಂಪತ್ತು ನಾಶವಾಗುವುದನ್ನು ಸೂಚಿಸುತ್ತದೆ. ಮತ್ತೊಂದೆಡೆ ದೀಪಾವಳಿಯ ದಿನದಂದು ಬೆಕ್ಕು ಮನೆಗೆ ಪ್ರವೇಶಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ವರ್ಷವಿಡೀ ಮನೆಯಲ್ಲಿ ಹಣ ಸಿಗುತ್ತದೆ.