ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನಿಗೆ ದೇವಾಲಯಗಳೇ ಇಲ್ಲವೇ ಎಂಬ ಪ್ರಶ್ನೆ ನಿಮಗೂ ಮೂಡಿರಬಹುದು. ಬ್ರಹ್ಮನಿಗೂ ಕೂಡ ಒಂದು ದೇವಾಲಯವಿದೆ. ದೇಶದಲ್ಲಿರುವ ದೇವಾಲಯಗಳಲ್ಲಿ ಕೇವಲ ಒಂದು ದೇವಾಲಯದಲ್ಲಿ ಮಾತ್ರ ಬ್ರಹ್ಮ ನನ್ನು ಪೂಜಿಸಲಾಗುತ್ತದೆ.
ಆ ದೇವಾಲಯ ಇರುವುದು ಪುಷ್ಕರದಲ್ಲಿ. ಬ್ರಹ್ಮ ದೇವಾಲಯವನ್ನು ಜಗತ್ಪೀಠ ಬ್ರಹ್ಮ ಮಂದಿರ ಎಂದು ಕರೆಯಲಾಗುತ್ತದೆ. ಈ ದೇವಾಲಯವು ರಾಜಸ್ಥಾನದ ಪುಷ್ಕರ ಸರೋವರದ ದಡದಲ್ಲಿದೆ.
ಇಂದಿಗೂ ಇಲ್ಲಿ ಬ್ರಹ್ಮನನ್ನು ಪೂಜಿಸಲಾಗುವುದಿಲ್ಲ, ಬದಲಾಗಿ ಇಲ್ಲಿನ ಪುಷ್ಕರ ಸರೋವರವನ್ನು ಪೂಜಿಸಲಾಗುತ್ತದೆ. ಹಾಗೂ ಭಕ್ತರು ಬ್ರಹ್ಮನ ದರ್ಶನವನ್ನು ಮಾತ್ರ ಪಡೆಯುತ್ತಾರೆ.
ಇತಿಹಾಸದಲ್ಲೂ ಈ ದೇವಾಲಯವನ್ನು ಯಾರು ನಿರ್ಮಿಸಿದರೆನ್ನುವ ಉಲ್ಲೇಖವಿಲ್ಲ. ಸುಮಾರು 1200 ವರ್ಷಗಳ ಹಿಂದೆ ಅರ್ಣವ ರಾಜ ವಂಶದ ಆಡಳಿತಗಾರರು ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದೆ.