ಬ್ರಶ್ ಮಾಡುವ ಮುನ್ನ ತಿಳಿದಿರಲಿ ಈ ಅಂಶ

ಬ್ರಶ್ ಹೇಗೆ ಮಾಡಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ! ಸರಿಯಾದ ಕ್ರಮದಲ್ಲಿ ಬ್ರಶ್ ಮಾಡದಿದ್ದರೆ ಹಲ್ಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ನೀವು ಒಳಗಾಗಬೇಕಾದೀತು.

ಮೊದಲಿಗೆ ಹಲ್ಲುಜ್ಜುವ ಕ್ರಮದ ಬಗ್ಗೆ ತಿಳಿದುಕೊಳ್ಳೋಣ. ಪ್ರತಿ ಬಾರಿ ಹಲ್ಲುಜ್ಜುವಾಗ ಹಿಂದಿನಿಂದ ಮುಂದಕ್ಕೆ ಉಜ್ಜುವುದು ಒಳ್ಳೆಯದಲ್ಲ. ಇದರಿಂದ ಹಲ್ಲಿನಲ್ಲಿ ಅವಿತ ಕೊಳೆ ಹಾಗೂ ಬ್ಯಾಕ್ಟೀರಿಯಾಗಳು ದೂರವಾಗುವುದಿಲ್ಲ. ಅದರ ಬದಲು ಮೇಲಿನಿಂದ ಕೆಳಕ್ಕೆ ಹಲ್ಲುಜ್ಜಿ. ಇದಕ್ಕೆ ತುಸು ಹೆಚ್ಚು ಸಮಯ ಬೇಕಾದೀತು. ಆದರೂ ಇದೇ ಕ್ರಮವನ್ನು ಅನುಸರಿಸಿ.

ಬ್ರಶ್ ಮಾಡಲು ಕನಿಷ್ಠ ಎರಡರಿಂದ ಐದು ನಿಮಿಷ ಮೀಸಲಿಡಿ. ಅವಸರದಲ್ಲಿ ಗಟ್ಟಿಯಾಗಿ ಒತ್ತಿ ಹಲ್ಲುಜ್ಜುವುದರಿಂದ ಹಲ್ಲಿನ ಮೇಲ್ಪದರಕ್ಕೆ ಹಾನಿಯಾಗುತ್ತದೆ ಹೊರತು ಹಲ್ಲು ಸ್ವಚ್ಛವಾಗುವುದಿಲ್ಲ.

ಹಲ್ಲುಜ್ಜುವ ಜೊತೆಗೆ ಹಲ್ಲಿನ ಮೇಲ್ಭಾಗದ ಒಸಡನ್ನು ಕ್ಲೀನ್ ಮಾಡಲು ಮರೆಯದಿರಿ. ರಾತ್ರಿ ಮಲಗುವ ಮುನ್ನ ಬ್ರಶ್ ಮಾಡುವುದು ಒಳ್ಳೆಯದೇ. ಆದರೆ ಊಟವಾದ ತಕ್ಷಣ ಬ್ರಶ್ ಮಾಡದಿರಿ. ಕನಿಷ್ಠ 30 ನಿಮಿಷಗಳ ಬಳಿಕ ಪೇಸ್ಟ್ ಬಳಸಿ ಬ್ರಶ್ ಮಾಡಿ. ರಾತ್ರಿ ಮಲಗುವ ಮುನ್ನ ಬಾಯಿ ಮುಕ್ಕಳಿಸಲು ಮರೆಯಿದಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read