ಬೈಕ್ ನಲ್ಲಿ ದೇಶ ಸುತ್ತಲು ಹೊರಟ ರಿಪ್ಪನ್ ಪೇಟೆ ಯುವಕ…!

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ವ್ಯಕ್ತಿಯೊಬ್ಬರು ಬೈಕ್ ನಲ್ಲಿ ದೇಶ ಸುತ್ತಲು ಹೊರಟಿದ್ದಾರೆ. ವಿಜೋ ವರ್ಗಿಸ್ ಈ ಸಾಹಸಯಾತ್ರೆ ಕೈಗೊಂಡವರಾಗಿದ್ದು ಇಂದಿನಿಂದ ಇದು ಶುರುವಾಗಿದೆ.

ಎರಡೂವರೆ ತಿಂಗಳ ಕಾಲ ಇವರು ಭಾರತದ ಎಲ್ಲ ರಾಜ್ಯಗಳ ಜೊತೆಗೆ ನೇಪಾಳ, ಭೂತಾನ್ ದೇಶಗಳಿಗೂ ಭೇಟಿ ನೀಡಲಿದ್ದಾರೆ. ಒಟ್ಟು ಹದಿಮೂರು ಸಾವಿರ ಕಿಲೋಮೀಟರ್ ದೂರವನ್ನು ವಿಜೋ ವರ್ಗೀಸ್ ಏಕಾಂಗಿಯಾಗಿ ಕ್ರಮಿಸಲಿದ್ದಾರೆ.

2013-14 ರಲ್ಲಿ ಇವರು ದಕ್ಷಿಣ ಭಾರತದಲ್ಲಿ 7,100 ಕಿಲೋಮೀಟರ್ ಕ್ರಮಿಸಿದ್ದು, ಇದೀಗ ಭಾರತ ಯಾತ್ರೆ ಕೈಗೊಂಡಿದ್ದಾರೆ. ಇವರ ಈ ಸಾಹಸಕ್ಕೆ ಮೂರು ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಹೇಳಲಾಗಿದ್ದು, ತಂದೆ ಪಿ.ಜೆ. ವರ್ಗೀಸ್ ಹಾಗೂ ತಾಯಿ ಜೋಲಿ ವರ್ಗೀಸ್ ಅವರ ಬೆಂಬಲವಿದೆ.2013-14 ರಲ್ಲಿ ಇವರು ದಕ್ಷಿಣ ಭಾರತದಲ್ಲಿ 7,100 ಕಿಲೋಮೀಟರ್ ಕ್ರಮಿಸಿದ್ದು, ಇದೀಗ ಭಾರತ ಯಾತ್ರೆ ಕೈಗೊಂಡಿದ್ದಾರೆ. ಇವರ ಈ ಸಾಹಸಕ್ಕೆ ಮೂರು ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಹೇಳಲಾಗಿದ್ದು, ತಂದೆ ಪಿ.ಜೆ. ವರ್ಗೀಸ್ ಹಾಗೂ ತಾಯಿ ಜೋಲಿ ವರ್ಗೀಸ್ ಅವರ ಬೆಂಬಲವಿದೆ.

ಪ್ರತಿನಿತ್ಯ 350 ರಿಂದ 400 ಕಿಲೋಮೀಟರ್ ಕ್ರಮಿಸುವ ಗುರಿಯನ್ನು ವಿಜೋ ವರ್ಗಿಸ್ ಹೊಂದಿದ್ದು, ತಮ್ಮ ಈ ಪ್ರಯಾಣದಲ್ಲಿ ಎಲ್ಲ ರಾಜ್ಯಗಳ ಮಣ್ಣು ಸಂಗ್ರಹಿಸಿ ಗಣ್ಯ ವ್ಯಕ್ತಿಯೊಬ್ಬರಿಗೆ ನೀಡುವ ಇರಾದೆ ಹೊಂದಿದ್ದಾರೆ. ಸಮಾನತೆ ಹಾಗೂ ರಕ್ತದಾನದ ಬಗ್ಗೆ ಅರಿವು ಮೂಡಿಸುವುದು ಇವರ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read