ಬೇಸಿಗೆಯಲ್ಲಿನ ಉಷ್ಣ ವಾತಾವರಣದಿಂದ ದೇಹ ಬಲು ಬೇಗ ಬಳಲುತ್ತದೆ. ಬಿಸಿಲಿನ ತೀವ್ರವಾದ ಝಳ, ಧೂಳು, ಚರ್ಮ ಮತ್ತು ಕೂದಲಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಸನ್ ಸ್ಕ್ರೀನ್ ಬಳಸುವುದು ಉತ್ತಮ.
ಹಾಗೆಯೇ ಬಾಯಾರಿಕೆ ನೀಗಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಣ್ಣದ ರಾಸಾಯನಿಕ ಮಿಶ್ರಿತ ಪಾನೀಯಕ್ಕಿಂತ ತಾಜಾ ಹಣ್ಣಿನ ರಸ ಸೇವಿಸಿದರೆ ಒಳ್ಳೆಯದು.
ಕಾಟನ್ ವಸ್ತ್ರಗಳನ್ನು ಧರಿಸುವುದರಿಂದ ಸ್ವಲ್ಪ ಮಟ್ಟಿನ ಸೆಕೆ ಕಡಿಮೆ ಮಾಡಿಕೊಳ್ಳಬಹುದು, ಸೌತೆಕಾಯಿ, ಕಲ್ಲಂಗಡಿ, ಟೊಮಾಟೊ ಹೀಗೆ ಯಾವುದಾದರೂ ಸುಲಭದಲ್ಲಿ ದೊರೆಯುವ ಹಣ್ಣಿನ ಸಿಪ್ಪೆಯಿಂದ ಸಿಗುವ ರಸವನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡಬೇಕು. ನಂತರ ಟಾಲ್ಕಂ ಪೌಡರ್ ಹಾಕಿಕೊಳ್ಳುವುದರಿಂದ ಬೆವರಿನ ವಾಸನೆ ಇರುವುದಿಲ್ಲ. ತ್ವಚೆಯೂ ಮೃದುವಾಗಿರುತ್ತದೆ.
ಮೆಂತೆ ನೆನೆಸಿ ಮೊಸರಿನ ಜೊತೆಯಲ್ಲಿ ರುಬ್ಬಿ ಕೂದಲಿಗೆ ಪ್ಯಾಕ್ ಹಾಕಿ ತಲೆ ಸ್ನಾನ ಮಾಡಿದರೆ ದೇಹ ತಂಪಾಗಿ ಬೇಸಿಗೆಯಲ್ಲೂ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.