ಸಪೋಟ ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲೊಂದು. ಇದರಲ್ಲಿ ವಿಟಮಿನ್-ಬಿ, ಸಿ, ಇ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಫೈಬರ್‌ನಂತಹ ಆರೋಗ್ಯಕರ ಅಂಶಗಳಿವೆ. ಸಪೋಟ ಅಥವಾ ಚಿಕ್ಕೂ ಹಣ್ಣನ್ನು ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು.
ಜನರು ಸಾಮಾನ್ಯವಾಗಿ ಚಿಕ್ಕೂ ಹಣ್ಣಿನ ಸಲಾಡ್ ಅಥವಾ ಜ್ಯೂಸ್ ಕುಡಿಯಲು ಇಷ್ಟಪಡುತ್ತಾರೆ. ಆದರೆ ಎಂದಾದರೂ ಚಿಕ್ಕೂ ಹಣ್ಣಿನ ಸಿಪ್ಪೆಯಿಂದ ಮಾಡಿದ ಮಿಲ್ಕ್ ಶೇಕ್ ಕುಡಿದಿದ್ದೀರಾ ? ಉತ್ತಮ ರುಚಿಯ ಜೊತೆಗೆ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನೂ ಇದು ಆರೋಗ್ಯಕರವಾಗಿಡುತ್ತದೆ. ದಿನವಿಡೀ ದೇಹದಲ್ಲಿ ಶಕ್ತಿ ತುಂಬಿರುತ್ತದೆ.
ಚಿಕ್ಕೂ ಸಿಪ್ಪೆಯ ಮಿಲ್ಕ್ ಶೇಕ್ ಮಾಡುವ ವಿಧಾನ
1 ಕಪ್ ಸಪೋಟ ಹಣ್ಣಿನ ಸಿಪ್ಪೆ, ಕೋಕೋ ಪೌಡರ್ 1 ಟೀಸ್ಪೂನ್, 1 ಕಪ್ಪ ಸಪೋಟ ಹಣ್ಣಿನ ತಿರುಳು, 3 ಕಪ್ ಹಾಲು, 1 ಚಮಚ ಸಕ್ಕರೆ ತೆಗೆದುಕೊಳ್ಳಿ. 7-8 ಪೀಸ್ ಐಸ್ ಕ್ಯೂಬ್ಸ್ ಇರಲಿ. ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿ. ಚಿಕ್ಕೂ ಸಿಪ್ಪೆಯ ಮಿಲ್ಕ್ ಶೇಕ್ ಸಿದ್ಧವಾಗುತ್ತದೆ. ಸರ್ವಿಂಗ್ ಗ್ಲಾಸ್‌ನಲ್ಲಿ ಮಿಲ್ಕ್‌ಶೇಕ್ ಹಾಕಿ, ಒಂದೆರಡು ಐಸ್ ಕ್ಯೂಬ್ ಬೆರೆಸಿ. ನಂತರ ಕೋಕೋ ಪೌಡರ್ ನಿಂದ ಅಲಂಕರಿಸಿ ತಣ್ಣಗೆ ಸರ್ವ್ ಮಾಡಿ.