ಏಪ್ರಿಲ್, ಮೇ ಬಂತೆಂದರೆ ಬಿರು ಬಿಸಿಲು, ಮಕ್ಕಳಿಗೆಲ್ಲಾ ಪರೀಕ್ಷೆ ಮುಗಿದು ರಜೆಯ ಮಜಾ ಎಲ್ಲಾದರು ಪ್ರವಾಸ ಹೋಗಲು ಪ್ಲಾನ್. ಆದರೆ ಕಳೆದೆರಡು ಬೇಸಿಗೆ ರಜೆಯಲ್ಲಿ ಕೊರೊನಾ ಕಾರಣಕ್ಕೆ ಎಲ್ಲರ ಜೀವನ ಬದಲಾಗಿದೆ ಮನೆಯಲ್ಲೇ ಇರುವ ಸಂದರ್ಭ ಬಂದೊದಗಿದೆ.
ಆದರೆ ಲಾಕ್ ಡೌನ್ ಮುಗಿದು ಗುಡ್ಡ – ಪರ್ವತಗಳನ್ನು ನೋಡಲು ಪ್ರವಾಸದ ಅವಕಾಶ ಬಂದರೆ ಈ ಸ್ಥಳಗಳ ಬಗ್ಗೆ ಮಾಹಿತಿ ನಿಮಗಿರಲಿ.
ಹಾರ್ಸ್ಲೆ ಹಿಲ್ಸ್, ಆಂಧ್ರ ಪ್ರದೇಶ: ಇದು ಸ್ವರ್ಗಕ್ಕೆ ಸಮ. ಗುಡ್ಡಗಳ ಸೌಂದರ್ಯ ಆನಂದಿಸಬೇಕೆಂದಿದ್ದರೆ ಖಂಡಿತವಾಗಿಯೂ ಇಲ್ಲಿಗೆ ಒಮ್ಮೆ ಭೇಟಿ ನೀಡಿ. ನೀವು
ಇಲ್ಲಿ ಗುಲ್ಮೊಹರ್, ನೀಲಿ ಗುಲ್ಮೊಹರ್ ಮತ್ತು ಯೂಕಲಿಪ್ಟಸ್ ಮರಗಳನ್ನು ಕಾಣಬಹುದು.
ಶಿಲ್ಲಾಂಗ್ : ಸುಂದರವಾದ ಪರ್ವತವನ್ನು ನೋಡುವ ಮಜಾವೇ ಬೇರೆ. ಶಿಲ್ಲಾಂಗ್ ಒಂದು ಅತ್ಯಂತ ಸುಂದರ ಸ್ಥಳವಾಗಿದ್ದು ಇಲ್ಲಿನ ವಿವಿಧ ಉತ್ಸವಗಳು ಮತ್ತು ಸಂಪ್ರದಾಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಚಿರಾಪುಂಜಿ: ಶಿಲ್ಲಾಂಗ್ನಿಂದ ಚಿರಾಪುಂಜಿಗೆ ಹೋಗುವ ದಾರಿಯಲ್ಲಿ ನಿಮಗೆ ಅನೇಕ ಗುಹೆಗಳು ಕಾಣಸಿಗುತ್ತವೆ. ಚಿರಾಪುಂಜಿಯು ಏಷ್ಯಾದ ಅತ್ಯಂತ ಸ್ವಚ್ಛ ಸ್ಥಳಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ಇದರ ಸೌಂದರ್ಯ ಮತ್ತಷ್ಟು ಹೆಚ್ಚು.
ಮನಾಲಿ: ಮನಾಲಿ ಯನ್ನು ಒಮ್ಮೆಯಾದ್ರೂ ನೋಡಲೇಬೇಕು. ಈ ಸ್ಥಳ ಯಾವಾಗಲೂ ಶಾಂತ, ತಂಪಾಗಿ ಮತ್ತು ಸುಂದರವಾಗಿರುತ್ತದೆ. ಕಾಡಿನ ಮತ್ತು ಶೀತ ವಾತಾವರಣವು ಮನಾಲಿಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
ತವಾಂಗ್: ಅರುಣಾಚಲ ಪ್ರದೇಶದ ಈ ನಗರ ಸಮುದ್ರ ಮಟ್ಟಕ್ಕಿಂತ 10,000 ಅಡಿ ಎತ್ತರದಲ್ಲಿದೆ. ಹಲವಾರು ಕಂದಕ, ಜಲಪಾತಗಳು ಮತ್ತು ನದಿಗಳಿಗೆ ಹೆಸರಾಗಿದೆ ತವಾಂಗ್. ತವಾಂಗ್ ನ ಸರೋವರಗಳು ಮತ್ತು ಜಲಪಾತಗಳು ಸುಡು ಬಿಸಿಲಿನಿಂದ ಬಳಲಿದ ಮನಸಿಗೆ ಮುದ ನೀಡುತ್ತದೆ.
ದ್ರಾಸ್: ವಿಶ್ವದ ಎರಡನೇ ಅತಿ ಶೀತ ಪ್ರದೇಶವಾದ ಈ ಕಣಿವೆ, ಎತ್ತರದ ಬೆಟ್ಟ ಗುಡ್ಡಗಳಿಂದ ಕೂಡಿದ್ದು ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದಲ್ಲಿದೆ.
ತೀರ್ಥನ್ ಕಣಿವೆ: ಪ್ರಕೃತಿಪ್ರಿಯರಿಗೆ ಈ ಸ್ಥಳವು ಸ್ವರ್ಗ. ತೀರ್ಥನ್ ಕಣಿವೆ ಹಿಮಾಲಯನ್ ರಾಷ್ಟ್ರೀಯ ಉದ್ಯಾನದಿಂದ 3 ಕಿ.ಮೀ ದೂರದಲ್ಲಿದೆ. ಇಲ್ಲಿನ ಟ್ರೌಟ್ ಮೀನುಗಳು ಬಹಳ ಜನಪ್ರಿಯವಾಗಿದೆ.
ಊಟಿ : ಊಟಿಯು ಭಾರತದ ಅತ್ಯಂತ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದಾಗಿದೆ. ಕಾಫಿ ಮತ್ತು ಚಹಾ ತೋಟಗಳಿಗೆ ಹೆಸರುವಾಸಿಯಾದ ಊಟಿಯ ಪರ್ವತಗಳು ಮತ್ತು ತಂಪು ಗಾಳಿ ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತವೆ.