ದಿನವಿಡೀ ಕಂಪ್ಯೂಟರ್ ಅಥವಾ ಮೊಬೈಲ್ ನೋಡಿ ರಾತ್ರಿ ವೇಳೆಗೆ ನಿಮ್ಮ ಕಣ್ಣುಗಳಿಗೆ ಆಯಾಸವಾಗುವುದು ಸಹಜ. ಅವುಗಳಿಗೆ ವಿರಾಮ ನೀಡಲು ಹೀಗೆ ಮಾಡಿ.
ಕಚೇರಿಯಲ್ಲಿ ಎಷ್ಟೇ ಕೆಲಸವಿರಲಿ ಗಂಟೆಗೊಮ್ಮೆ ಕಂಪ್ಯೂಟರ್ ಪರದೆಯಿಂದ ಕಣ್ಣಿಗೆ ವಿರಾಮ ನೀಡುವ ಅಭ್ಯಾಸ ಬೆಳೆಸಿಕೊಳ್ಳಿ. ಕನಿಷ್ಠ ಎರಡು ನಿಮಿಷ ಹೊತ್ತು ಕಣ್ಣು ಮುಚ್ಚಿ ರೆಸ್ಟ್ ಮಾಡಿ. ಇದರಿಂದ ಮೆದುಳು ಚುರುಕುಗೊಳ್ಳುವುದು ಮಾತ್ರವಲ್ಲ, ಕಣ್ಣಿಗೂ ಆರಾಮ ಸಿಕ್ಕು ನಿಮಗೆ ರಿಲ್ಯಾಕ್ಸ್ ಫೀಲ್ ತಂದುಕೊಡುತ್ತದೆ.
ಸ್ಮಾರ್ಟ್ ಫೋನ್ ಗಳನ್ನು ಮಕ್ಕಳಿಂದ ದೂರವಿಟ್ಟಷ್ಟು ಒಳ್ಳೆಯದು. ಅನಿವಾರ್ಯವಾದಾಗ ಅಂದರೆ ತರಗತಿಗಳು ನಡೆಯುತ್ತಿದ್ದರೆ ಅದು ಮುಗಿದಾಕ್ಷಣ ಮಕ್ಕಳನ್ನು ಹೊರಗೆ ಕರೆಯಿರಿ. ಸತತ ಪರದೆ ನೋಡಿದ ಕಣ್ಣುಗಳಿಗೆ ಹಸಿರು ಗಿಡ ಮರಗಳನ್ನು ವೀಕ್ಷಿಸುವಂತೆ ಮಾಡುವುದು ಬಹಳ ಒಳ್ಳೆಯದು.
ಹೆಚ್ಚು ಕಂಪ್ಯೂಟರ್ ನೋಡುವ ಅನಿವಾರ್ಯತೆ ಇದ್ದಾಗ ಕಣ್ಣಿಗೆ ಆಂಟಿ ಗ್ಲೇರ್ ಗ್ಲಾಸ್ ಗಳನ್ನು ಹಾಕಿಕೊಳ್ಳಿ. ಉತ್ತಮ ವೈದ್ಯರ ಸಲಹೆ ಪಡೆದು ಅದರಂತೆ ನಡೆದುಕೊಳ್ಳಿ. ಪರದೆಯ ಬೆಳಕಿನ ಮಟ್ಟವನ್ನು ಸಾಧ್ಯವಾದಷ್ಟು ಕಡಿಮೆ ಇಡಿ. ಇದರಿಂದ ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.