ಹುರುಳಿಯನ್ನು ಬಡವರ ಬೇಳೆ ಎಂದೇ ಕರೆಯಲಾಗುತ್ತದೆ. ಇದು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಅದರಲ್ಲೂ ಕಿಡ್ನಿ ಸ್ಟೋನ್ ಹೊಂದಿರುವವರಿಗೆ ಇದು ರಾಮಬಾಣವೆಂದು ಹೇಳಲಾಗುತ್ತದೆ.
ಹುರುಳಿ ಪ್ರಾಣಿಗಳಿಗೂ ಅತ್ಯುತ್ತಮವಾಗಿದ್ದು, ಹಾಲಿನ ಕೊರತೆ ಉಂಟಾದ ಸಂದರ್ಭದಲ್ಲಿ ಹಸು, ಕುರಿ ಮತ್ತು ಮೇಕೆಗಳಿಗೆ ಇದನ್ನು ನೆನೆಸಿ ರುಬ್ಬಿದ ಬಳಿಕ ಕುಡಿಸಲಾಗುತ್ತದೆ. ಅಲ್ಲದೆ ಎತ್ತು, ಕುದುರೆಗಳಿಗೂ ಹುರಳಿ ನುಚ್ಚು ಮತ್ತು ಹುರುಳಿ ಮೇವನ್ನು ನೀಡಲಾಗುತ್ತದೆ.
ಮಳೆ ಕೈಕೊಟ್ಟ ಸಂದರ್ಭದಲ್ಲಿ ಹುರುಳಿಯನ್ನು ಬಿತ್ತಿ ಬೆಳೆಯುವ ಸಂಪ್ರದಾಯ ಇದ್ದು, ಇದೀಗ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಹುರುಳಿಗೆ ಬಂಪರ್ ಬೆಲೆ ಸಿಗುತ್ತಿದೆ. ಕೆಜಿಗೆ 30 ರಿಂದ 35 ರೂಪಾಯಿಗೆ ಮಾರಾಟವಾಗುತ್ತಿದ್ದ ಹುರುಳಿ ಈಗ 65 ರಿಂದ 80 ರೂಪಾಯಿವರೆಗೆ ಮಾರಾಟವಾಗುತ್ತಿದೆ.