ಫೆಬ್ರವರಿ ತಿಂಗಳು ಹತ್ತಿರ ಬಂದೇಬಿಟ್ಟಿದೆ. ಇದನ್ನು ‘ಪ್ರೇಮಿಗಳ ತಿಂಗಳು’ ಎಂದೂ ಕರೆಯುತ್ತಾರೆ. ಫೆಬ್ರವರಿ 14ನ್ನು ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತದೆ. ಈ ದಿನ ಸಾಮಾನ್ಯವಾಗಿ ಎಲ್ಲರೂ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಒಂದಿಲ್ಲೊಂದು ಉಡುಗೊರೆ ಕೊಟ್ಟು ತಮ್ಮ ಮನಸ್ಸಿನ ಭಾವನೆಯನ್ನು ಹಂಚಿಕೊಳ್ಳುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಕೆಂಪು ಗುಲಾಬಿಯನ್ನು ಕೊಟ್ಟು ಪ್ರೇಮನಿವೇದನೆ ಮಾಡಿಕೊಳ್ಳುವ ಪರಿಪಾಠ ಮೊದಲಿನಿಂದಲೂ ಇದೆ. ಪ್ರೀತಿಯ ಪ್ರಸ್ತಾಪದ ಸಮಯದಲ್ಲಿ ಈ ಕೆಂಪು ಗುಲಾಬಿ ಕೊಡುವುದಕ್ಕೆ ಹಲವು ಅರ್ಥಗಳಿವೆ.
ಮಾತುಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗದ್ದನ್ನು ಈ ಚೆಂಗುಲಾಬಿಗಳು ಹೇಳುತ್ತವೆ. ಪ್ರೀತಿಯನ್ನು ವ್ಯಕ್ತಪಡಿಸಲು ಕೆಂಪು ಗುಲಾಬಿಗಳನ್ನು ನೀಡುವ ಅಭ್ಯಾಸವು ನೂರಾರು ವರ್ಷಗಳ ಹಿಂದಿನದು. ಗ್ರೀಕ್‌ನಲ್ಲಿ ಕೆಂಪು ಗುಲಾಬಿ, ಅಫ್ರೋಡೈಟ್‌ಗೆ ಸಂಬಂಧಿಸಿದೆ. ರೋಮನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಅಫ್ರೋಡೈಟ್ ಅನ್ನು ಪ್ರೀತಿ ಮತ್ತು ಸೌಂದರ್ಯದ ದೇವರು ಎಂದು ಪರಿಗಣಿಸಲಾಗುತ್ತದೆ. ಕೆಲವು ರೋಮನ್ನರು ಅದನ್ನು ಫಲವತ್ತತೆಯ ದೇವರು ಎಂದು ಪರಿಗಣಿಸುತ್ತಾರೆ. ಗುಲಾಬಿ ನೀಡುವುದರಿಂದ ಪ್ರೀತಿಯ ಬಾಂಧವ್ಯ ವೃದ್ಧಿಯಾಗುತ್ತದೆ ಎಂಬುದು ನಂಬಿಕೆ. ಕೆಂಪು ಗುಲಾಬಿ ಉತ್ಸಾಹದ ಪ್ರತೀಕ. ನಿಮ್ಮ ಆಂತರಿಕ ಪ್ರೀತಿಯನ್ನು ಕೆಂಪು ಗುಲಾಬಿಯ ಮೂಲಕ ವ್ಯಕ್ತಪಡಿಸಬಹುದು.
ನಿಮ್ಮ ಸಂಗಾತಿಗೆ ಮತ್ತೆ ಮತ್ತೆ ಕೆಂಪು ಗುಲಾಬಿಗಳನ್ನು ನೀಡುವುದರಿಂದ ಸಂಬಂಧವು ಗಟ್ಟಿಯಾಗುತ್ತದೆ. ಆಳವಾದ ಭಾವನೆಗಳನ್ನು ವ್ಯಕ್ತಪಡಿಸಲು ಕೆಂಪು ಗುಲಾಬಿ ಅತ್ಯುತ್ತಮ ಮಾರ್ಗವಾಗಿದೆ. ಇದಲ್ಲದೆ, ಕೆಂಪು ಗುಲಾಬಿಯನ್ನು ಮುಗ್ಧತೆ, ಶುದ್ಧತೆ ಮತ್ತು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಪ್ರೀತಿ ಕಡಿಮೆಯಾಗಲು ಪ್ರಾರಂಭಿಸಿದಾಗ, ಅವರು ಪರಸ್ಪರ ಕೆಂಪು ಗುಲಾಬಿಗಳನ್ನು ನೀಡಬೇಕು ಎಂದು ಕೆಲವರು ನಂಬುತ್ತಾರೆ. ಇದರಿಂದ ಅವರಿಬ್ಬರ ಮಧ್ಯೆ ಪ್ರೀತಿ ಮತ್ತು ಪ್ರಣಯ ಮತ್ತೆ ಮರಳುತ್ತದೆ.