ಪುಸ್ತಕಗಳಲ್ಲಿ $90,000 ನಗದನ್ನು ಬಚ್ಚಿಟ್ಟು ಸಾಗಿಸ್ತಿದ್ದ ವಿದೇಶಿಗನನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಪುಸ್ತಕದ ಪುಟಗಳ ನಡುವೆ ಪ್ರತ್ಯೇಕವಾಗಿ ಬೃಹತ್ ಮೊತ್ತದ ನೋಟುಗಳನ್ನು ಇರಿಸಲಾಗಿತ್ತು. ಬಂಧಿತ ವ್ಯಕ್ತಿಯ ವಿಚಾರಣೆ ನಡೆಸುತ್ತಿದ್ದು ಸಮಗ್ರ ಮಾಹಿತಿ ಕಲೆಹಾಕಲಾಗ್ತಿದೆ.
ಭಾರತದಲ್ಲಿ, ಚಿನ್ನ, ನಗದು ಮತ್ತು ಇತರ ವಸ್ತುಗಳಂತಹ ಬೆಲೆಬಾಳುವ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಅಥವಾ ಹೊರಗೆ ಸಾಗಿಸಲು ಪ್ರಯತ್ನಿಸುತ್ತಿರುವಾಗ ಪ್ರಯಾಣಿಕರು ಸೆರೆಹಿಡಿಯಲ್ಪಡುವುದು ಅಸಾಮಾನ್ಯವೇನಲ್ಲ.
ಒಂದು ದಿನದ ಹಿಂದೆ ಜೈಪುರ ವಿಮಾನ ನಿಲ್ದಾಣದ ಅಧಿಕಾರಿಗಳು ಇಬ್ಬರು ಪ್ರಯಾಣಿಕರಿಂದ 55 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.
ಶಾರ್ಜಾಕ್ಕೆ ತೆರಳುತ್ತಿದ್ದ ಪ್ರಯಾಣಿಕರೊಬ್ಬರು ಪ್ಯಾಂಟ್‌ನ ಕೆಳಭಾಗದಲ್ಲಿ 22 ಲಕ್ಷ ರೂಪಾಯಿ ಮೊತ್ತದ 380 ಗ್ರಾಂ ಚಿನ್ನದ ಗಟ್ಟಿಯನ್ನ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದರು.