ಸಕಾರಾತ್ಮಕ ಶಕ್ತಿ ನೆಲೆಸಲು ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿ….!

ಪಾಸಿಟಿವ್ ಎನರ್ಜಿ ಬಗ್ಗೆ ನೀವು ಕೇಳಿರುತ್ತೀರಿ. ಇದು ತುಂಬಾ ಅವಶ್ಯಕ. ಇದು ಇದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎನ್ನುತ್ತಾರೆ ಕೆಲವರು. ಕೆಲವೊಂದು ಗಿಡದಿಂದ ಕೂಡ ಈ ಪಾಸಿಟಿವ್ ಎನರ್ಜಿ ಸಿಗುತ್ತದೆ ಎಂಬುದು ನಿಮಗೆ ಗೊತ್ತಾ…? ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.

ಪೀಸ್ ಲಿಲ್ಲಿ: ಹಸಿರು ಬಣ್ಣದ ಎಲೆಗಳನ್ನು ಹೊಂದಿರುವ ಈ ಗಿಡದಲ್ಲಿ ಬಿಳಿ ಬಣ್ಣದ ಎಲೆಗಳ ರೀತಿ ಹೂವಿರುತ್ತದೆ, ಬಾಲ್ಕನಿಯಲ್ಲಿ , ಬೆಡ್ ರೂಂನಲ್ಲಿ ಈ ಗಿಡವನ್ನು ಬೆಳೆಸುವುದರಿಂದ ಒಂದು ಪಾಸಿಟಿವ್ ವೈಬ್ಸ್ ಸಿಗುತ್ತದೆಯಂತೆ. ಇದಕ್ಕೆ ಸೂರ್ಯನ ಬಿಸಿಲು ಅಷ್ಟಾಗಿ ಬೇಡ. ಪಾಟ್ ನಲ್ಲಿ ಇದನ್ನು ನೆಡಬಹುದು.

ರೊಸ್ಮೆರಿ ಗಿಡ: ಇದನ್ನು ತೈಲ, ಶಾಂಪೂ ತಯಾರಿಕೆಯಲ್ಲಿ ಬಳಸುತ್ತಾರೆ. ಗಾಳಿಯಲ್ಲಿರುವ ಹಾನಿಕಾರಕ ಟಾಕ್ಸಿನ್ ಗಳನ್ನು ಇದು ನಿವಾರಿಸುತ್ತದೆ, ಈ ಗಿಡವನ್ನು ಮನೆಯಲ್ಲಿ ಪಾಟ್ ನಲ್ಲಿ ಹಾಕಿ ಬೆಳೆಸುವುದರಿಂದ ನೆನೆಪಿನ ಶಕ್ತಿ ಹೆಚ್ಚುತ್ತದೆ. ಚೆನ್ನಾಗಿ ನಿದ್ರೆ ಬರುತ್ತದೆ ಹಾಗೇ ಮನಸ್ಸು ಕೂಡ ಉಲ್ಲಾಸಿತವಾಗಿರುತ್ತದೆ. ಇದರ ಪರಿಮಳ ಆಹ್ಲಾದಕರವಾಗಿರುತ್ತದೆ.

ಲಕ್ಕಿ ಬ್ಯಾಂಬೋ/ವಾಸ್ತು ಗಿಡ: ಇದರ ಹೆಸರಂತೂ ಎಲ್ಲರೂ ಕೇಳಿರುತ್ತಿರಿ. ಸಾಮಾನ್ಯವಾಗಿ ಹೆಚ್ಚಿನವರ ಮನೆಯಲ್ಲಿ ಇದನ್ನು ಇಟ್ಟಿರುತ್ತಾರೆ. ಇದರ ಆರೈಕೆ ಕೂಡ ಸುಲಭವಾಗಿ ಮಾಡಬಹುದು. ಜತೆಗೆ ಸೂರ್ಯನ ಬೆಳಕು ಇದಕ್ಕೆ ಜಾಸ್ತಿ ಬೇಕಾಗಿಲ್ಲ. ಒಂದು ಗಾಜಿನ ಬೌಲ್ ನಲ್ಲಿ 1 ಇಂಚಿನಷ್ಟು ನೀರು ಹಾಕಿ ಇದನ್ನು ಇಟ್ಟರೆ ಸಾಕು ಚೆನ್ನಾಗಿ ಬೆಳೆಯುತ್ತದೆ. ಇದು ಕೂಡ ಮನೆಯಲ್ಲಿ ಪಾಸಿಟಿವ್ ವೈಬ್ಸ್ ಉಂಟು ಮಾಡುತ್ತದೆಯಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read