ಬೇರೆಯವರ ಬಟ್ಟೆ, ವಸ್ತುಗಳನ್ನು ಕೆಲವರು ಹಾಕಿಕೊಳ್ತಾರೆ. ಮತ್ತೆ ಕೆಲವರು ಸ್ವಚ್ಛತೆ ಕಾರಣ ಹೇಳಿ ಅವುಗಳಿಂದ ದೂರವಿರ್ತಾರೆ. ವಾಸ್ತು ಶಾಸ್ತ್ರ ಕೂಡ ಕೆಲವೊಂದು ಬೇರೆಯವರ ವಸ್ತುಗಳನ್ನು ಬಳಸದಿರುವಂತೆ ಸಲಹೆ ನೀಡುತ್ತದೆ. ಬೇರೆಯವರ ವಸ್ತುಗಳನ್ನು ಬಳಸುವುದರಿಂದ ಆರ್ಥಿಕ ಹಾಗೂ ವೈಯಕ್ತಿಕ ಸಮಸ್ಯೆ ಎದುರಾಗುತ್ತದೆಯಂತೆ.
ಫೋನ್: ಅವಶ್ಯಕತೆ ಇರುವಾಗ ನಾವು ಬೇರೆಯವರ ಫೋನ್ ಬಳಸುತ್ತೇವೆ. ಕೆಲಸ ಮುಗಿದ ತಕ್ಷಣ ಅವರಿಗೆ ವಾಪಸ್ ನೀಡದೆ ನಮ್ಮ ಬಳಿಯೇ ಇಟ್ಟುಕೊಂಡು ಬಿಡುತ್ತೇವೆ. ಹಾಗೆ ಮಾಡುವುದರಿಂದ ಆರ್ಥಿಕ ಕಷ್ಟವನ್ನು ಎದುರಿಸಬೇಕಾಗುತ್ತದೆ.
ಹಾಸಿಗೆ : ಬೇರೆಯವರ ಹಾಸಿಗೆ ಅಥವಾ ಮಂಚದ ಮೇಲೆ ಮಲಗುವುದು ಸೂಕ್ತವಲ್ಲ. ಹಾಗೆ ಮಾಡುವುದರಿಂದ ಸದಾ ಅದರಲ್ಲಿ ಮಲಗುವವರ ನಡುವೆ ಗಲಾಟೆ, ಜಗಳವಾಗುತ್ತದೆ. ಜೊತೆಗೆ ಧನ ಹಾನಿಯುಂಟಾಗುತ್ತದೆ.
ಕೈ ಗಡಿಯಾರ : ಕೈ ಗಡಿಯಾರ ಮನುಷ್ಯನ ಮೇಲೆ ಪ್ರಭಾವ ಬೀರುತ್ತದೆ. ಬೇರೆಯವರ ವಾಚ್ ಬಳಸುವುದರಿಂದ ಕೆಲಸದಲ್ಲಿ ಜಯ ಸಿಗುವುದಿಲ್ಲ.
ಕರವಸ್ತ್ರ : ಬೇರೆಯವರ ಕರವಸ್ತ್ರವನ್ನು ಎಂದೂ ಬಳಸಬಾರದು. ಹೀಗೆ ಮಾಡಿದ್ರೆ ಇಬ್ಬರ ನಡುವೆ ಜಗಳ ಶುರುವಾಗುತ್ತದೆ ಎಂಬ ಮಾತಿದೆ. ವಾಸ್ತುಶಾಸ್ತ್ರದ ಪ್ರಕಾರ ಬೇರೆಯವರ ಕರವಸ್ತ್ರ ಬಳಸಿದ್ರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಜೊತೆಗೆ ಒತ್ತಡ ಎದುರಿಸಬೇಕಾಗುತ್ತದೆ.
ಬಟ್ಟೆ : ಬೇರೆಯವರ ಬಟ್ಟೆ ಧರಿಸುವುದರಿಂದ ಆರೋಗ್ಯ ಸಮಸ್ಯೆ ಎದುರಾಗುವ ಜೊತೆಗೆ ಆರ್ಥಿಕ ಮುಗ್ಗಟ್ಟು ಕಂಡು ಬರುತ್ತದೆ. ಹಾಗಾಗಿ ಬೇರೆಯವರ ಬಟ್ಟೆಯನ್ನು ಧರಿಸಬೇಡಿ.