ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವರು ಕೆಮಿಕಲ್ ಯುಕ್ತ ಕ್ರೀಮಗಳನ್ನು ಬಳಸಿ ಬ್ಲೀಚ್ ಮಾಡಿಸಿ ಚರ್ಮವನ್ನು ಹಾಳುಮಾಡಿಕೊಳ್ಳುತ್ತಾರೆ. ಅದರ ಬದಲು ನೈಸರ್ಗಿಕವಾದ ಈ ವಸ್ತುಗಳನ್ನು ಬಳಸಿ ಚರ್ಮವನ್ನು ಬ್ಲೀಚ್ ಮಾಡಬಹುದು.
*ಅಲೊವೆರಾ ಮತ್ತು ಅಕ್ಕಿಹಿಟ್ಟಿನ ಬ್ಲೀಚ್ : ಅಲೋವೆರಾ ಚರ್ಮವನ್ನು ಶುದ್ದಿಗೊಳಿಸುತ್ತದೆ. ಅಕ್ಕಿ ಹಿಟ್ಟು ನೈಸರ್ಗಿಕವಾಗಿ ಚರ್ಮವನ್ನು ಬಿಳಿ ಮಾಡುತ್ತದೆ. ಹಾಗಾಗಿ 1 ಚಮಚ ಅಲೋವೆರಾ ಲೋಳೆ, 1 ಚಮಚ ಅಕ್ಕಿಹಿಟ್ಟು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 25 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರಕ್ಕೆರಡು ಬಾರಿ ಮಾಡಿ.
*ಕಡಲೆಹಿಟ್ಟು ಮತ್ತು ನಿಂಬೆ ಬ್ಲೀಚ್ : ಕಡಲೆಹಿಟ್ಟು ಚರ್ಮದ ಆಳಕ್ಕೆ ಹೋಗಿ ಸ್ವಚ್ಚ ಮಾಡಿ ಬಿಳುಪಾಗಿಸುತ್ತದೆ. ನಿಂಬೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ, ಮೊಡವೆ, ಗುಳ್ಳೆಗಳನ್ನು ನಿವಾರಿಸುತ್ತದೆ. ಹಾಗಾಗಿ 1 ಚಮಚ ಕಡಲೆ ಹಿಟ್ಟಿಗೆ 2 ಚಮಚ ತಾಜಾ ನಿಂಬೆ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಬಳಿಕ ಮಾಯಿಶ್ಚರೈಸರ್ ಕ್ರೀಂ ಹಚ್ಚಿ. ಇದನ್ನು ವಾರಕ್ಕೆರಡು ಬಾರಿ ಮಾಡಿ.