ಹೆಚ್ಚಾಗಿ ನೆತ್ತಿಯ ಭಾಗದಲ್ಲಿ ಮೂಡುವ ಕೀವುಗುಳ್ಳೆಗಳು ವಿಪರೀತ ತುರಿಕೆಯನ್ನುಂಟು ಮಾಡುತ್ತವೆ. ಬಳಿಕ ಈ ಭಾಗದಲ್ಲಿ ಹೆಚ್ಚು ಕೂದಲು ಬೆಳೆಯದಂತೆ ಮಾಡುತ್ತವೆ. ಆರಂಭದ ಹಂತದಲ್ಲೇ ಅದನ್ನು ಗುರುತಿಸಿ ತಜ್ಞರ ಸಲಹೆ ಪಡೆದರೆ ಅಥವಾ ಈ ಮನೆಮದ್ದನ್ನು ಪ್ರಯತ್ನಿಸಿದರೆ ನಿಮ್ಮ ಸಮಸ್ಯೆ ಬಹುಬೇಗ ಅಂತ್ಯ ಕಾಣಬಹುದು.
ಮನೆಯಂಗಳದಲ್ಲಿ ಬೆಳೆದ ಅಲೋವೇರಾ ಸಸ್ಯದ ಜೆಲ್ ತೆಗೆದು ನಿಮ್ಮ ನೆತ್ತಿಗೆ ಮಸಾಜ್ ಮಾಡಿಕೊಳ್ಳಿ. ಇದರಿಂದ ನೆತ್ತಿ ತಂಪಾಗುವುದು ಮಾತ್ರವಲ್ಲ, ಹಿತಕರವಾದ ಅನುಭವವೂ ನಿಮ್ಮದಾಗುತ್ತದೆ. ಇದರಿಂದ ಕೆಂಪಾಗಿರುವ ಗುಳ್ಳೆಗಳ ತುರಿಕೆಯೂ ಕಡಿಮೆಯಾಗುತ್ತದೆ.
ಇದು ಬ್ಯಾಕ್ಟೀರಿಯಾ ಸೋಂಕನ್ನೂ ತಡೆಗಟ್ಟುತ್ತದೆ. ಸೋಪು ಉತ್ತಮ ಬ್ಯಾಕ್ಟೀರಿಯಾ ನಿವಾರಕವಾದ್ದರಿಂದ ಕೀವುಗುಳ್ಳೆ ಬಂದ ಜಾಗವನ್ನು ಸೋಪಿನಿಂದ ತೊಳೆದುಕೊಳ್ಳಿ. ಉಗುರು ಬೆಚ್ಚಗಿನ ನೀರಿಗೆ ಸೋಪು ಹಾಕಿ ನೊರೆ ಬರಿಸಿ ಇದನ್ನು ಗುಳ್ಳೆಗಳಿರುವ ಜಾಗಕ್ಕೆ ಹಚ್ಚಿ, ಐದು ನಿಮಿಷ ಬಳಿಕ ತೊಳೆಯಿರಿ.
ಬಾದಾಮಿ, ಕೊಬ್ಬರಿ ಅಥವಾ ಆಲಿವ್ ಆಯಿಲ್ ಬಳಸಿ ನೆತ್ತಿಗೆ ಮಸಾಜ್ ಮಾಡುವುದರಿಂದಲೂ ಈ ಸಮಸ್ಯೆ ದೂರವಾಗುತ್ತದೆ. ಇದನ್ನು ದಿನಕ್ಕೆ ಎರಡು ಬಾರಿಯಾದರೂ ಮಾಡಬೇಕು. ತಲೆಯ ಭಾಗಕ್ಕೆ ದಪ್ಪಗಿನ ಟವೆಲ್ ಅನ್ನು ಬಿಸಿನೀರಿನಲ್ಲಿ ಅದ್ದಿ ಅದರ ಬಿಸಿಯಿಂದ ಶಾಖ ಕೊಡುವುದರಿಂದಲೂ ಈ ನೋವನ್ನು ಕಡಿಮೆ ಮಾಡಬಹುದು.