ನಿವೃತ್ತ ಯೋಧನಿಗೆ ಹನಿಟ್ರ್ಯಾಪ್; ಕಿರುತೆರೆ ನಟಿ ಅರೆಸ್ಟ್

Kollam 'honey trap': TV serial actress, friend, extort Rs 11 lakh from  75-yr-old man; arrested, TV serial actress, honey trap, Kollam, Paravur, Nithya  Sasi, 75 year old man, kerala crime newsನಿವೃತ್ತ ಯೋಧರೊಬ್ಬರಿಗೆ ಹನಿಟ್ರ್ಯಾಪ್ ಮಾಡುವ ಮೂಲಕ ಅವರಿಂದ 11 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಕೇರಳದ ಕಿರುತೆರೆ ನಟಿ ಹಾಗೂ ಆಕೆಯ ಗೆಳೆಯನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಕಿರುತೆರೆ ನಟಿ ನಿತ್ಯಾಶಶಿ ಹಾಗೂ ಆಕೆಯ ಗೆಳೆಯ ಬಿನು ಬಂಧಿತರಾಗಿದ್ದು, ಇವರಿಬ್ಬರೂ ತಮಗೆ ಪರಿಚಯವಾಗಿದ್ದ 75 ವರ್ಷದ ನಿವೃತ್ತ ಯೋಧರ ಬೆತ್ತಲೆ ಫೋಟೋ ಹಾಗೂ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ಮೂಲಕ ಹಣ ವಸೂಲಿ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಈ ಯೋಧ ನಿವೃತ್ತರಾದ ಬಳಿಕ ಕೇರಳ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ತಿರುವನಂತಪುರಂನಲ್ಲಿ ವಾಸವಾಗಿದ್ದರು. ಇವರ ಪರಿಚಯ ಮಾಡಿಕೊಂಡಿದ್ದ ನಿತ್ಯಾಶಶಿ ಸಲುಗೆ ಬೆಳೆಸಿಕೊಂಡಿದ್ದಳು.

ಒಮ್ಮೆ ಏಕಾಂತ ಸ್ಥಳಕ್ಕೆ ಇವರನ್ನು ಕರೆಸಿಕೊಂಡ ಕಿರುತೆರೆ ನಟಿ ಬೆತ್ತಲಾಗುವಂತೆ ಮಾಡಿದ್ದು, ಈ ಸಂದರ್ಭದಲ್ಲಿ ಮೊದಲೇ ಮಾತಾಡಿಕೊಂಡಿದ್ದಂತೆ ಪ್ರವೇಶ ಮಾಡಿದ್ದ ಬಿನು ಇವರಿಬ್ಬರು ಸಲುಗೆಯಲ್ಲಿರುವ ಫೋಟೋ ಹಾಗೂ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ನಿತ್ಯಾಶಶಿ ಹಾಗೂ ಬಿನು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದರು.

ವಿಡಿಯೋ ಹಾಗೂ ಫೋಟೋ ಬಹಿರಂಗವಾಗುವ ಹೆದರಿಕೆಯಿಂದ ನಿವೃತ್ತ ಯೋಧ 11 ಲಕ್ಷ ರೂಪಾಯಿಗಳನ್ನು ನೀಡಿದ್ದು, ಆದರೆ ಇವರಿಬ್ಬರ ಕಿರುಕುಳ ಮುಂದುವರೆದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಶುಕ್ರವಾರದಂದು ಕಿರುತೆರೆ ನಟಿ ನಿತ್ಯಾಶಶಿ ಹಾಗೂ ಆಕೆಯ ಸ್ನೇಹಿತ ಬಿನುವನ್ನು ಬಂಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read