
ಸಾಯಿಬಾಬಾನ ಶಕ್ತಿ ಅಪಾರವಾದದ್ದು. ಸಾಕಷ್ಟು ಜನರು ತಮ್ಮ ಇಷ್ಟಾರ್ಥಗಳನ್ನು ನೇರವೇರಿಸಿಕೊಳ್ಳಲು ಸಾಯಿಬಾಬಾನ ಪೂಜೆ, ವೃತಗಳನ್ನು ಮಾಡುತ್ತಾರೆ. ಬಾಬಾ ತಮ್ಮನ್ನು ನಂಬಿ ಬಂದ ಭಕ್ತರ ಕೈಬಿಡುವುದಿಲ್ಲ ಎಂಬ ನಂಬಿಕೆ ಭಕ್ತರದ್ದು.
ಸಾಯಿಬಾಬಾ ನಿಮ್ಮ ಮನಸ್ಸಿನ ದುಗುಡವನ್ನೆಲ್ಲಾ ನಿವಾರಿಸಿ ನಿಮ್ಮ ಆಸೆಗಳನ್ನೆಲ್ಲಾ ಪೂರೈಸಬೇಕೆಂದರೆ ಹೀಗೆ ಮಾಡಿ.
ಗುರುವಾರದಂದು ಸಾಯಿಬಾಬಾನನ್ನು ಆರಾಧಿಸುತ್ತ. ಪರಿಮಳದಿಂದ ಕೂಡಿದ ಹೂವು, ಹಾಗೇ ಬಾಬಾನಿಗೆ ಇಷ್ಟವಾದ ಹಲ್ವಾ ಜತೆಗೆ ಪಾಲಕ್ ಸೊಪ್ಪಿನಿಂದ ಮಾಡಿದ ಪದಾರ್ಥವನ್ನು ಸಾಯಿಬಾಬಾನಿಗೆ ಅರ್ಪಿಸಿದರೆ ನಿಮ್ಮ ಆಸೆಗಳೆಲ್ಲಾ ಬೇಗನೆ ಈಡೇರುತ್ತದೆಯಂತೆ. ಈ ವಸ್ತುಗಳು ಸಾಯಿಬಾಬಾನಿಗೆ ತುಂಬಾ ಪ್ರಿಯವಾದದಂತೆ.