ನಕಲಿ ಸ್ವಾಮೀಜಿ ಹಿಡಿದು ಧರ್ಮದೇಟು ನೀಡಿದ ಸಾರ್ವಜನಿಕರು

ಹಾವೇರಿ: ಸ್ವಾಮೀಜಿ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ ನಕಲಿ ಸ್ವಾಮಿಜಿಯನ್ನು ಹಿಡಿದು ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮುಳಥಳ್ಳಿಯಲ್ಲಿ ನಡೆದಿದೆ.

ಗುರುಪಾದಯ್ಯ ವಿರಕ್ತಮಠ ಎಂಬ ನಕಲಿ ಸ್ವಾಮೀಜಿ ಪಾದಪೂಜೆ ಮಾಡಿಸಿಕೊಂಡು ಜನರ ಬಳಿ ಸುಳ್ಳು ಹೇಳಿ ಹಣ ದೋಚಿ ಪರಾರಿಯಾಗುತ್ತಿದ್ದ.

ರೈತರೊಬ್ಬರನ್ನು ನಂಬಿಸಿ ಟ್ರ್ಯಾಕ್ಟರ್ ಗೆ ಟ್ರೈಲರ್ ಮಾಡಿಸಿಕೊಡುವುದಾಗಿ ಹೇಳಿ 5 ಲಕ್ಷ ಹಣ ಪಡೆದು ಸತಾಯಿಸುತ್ತಿದ್ದ. ಹಣ ವಾಪಸ್ ಕೇಳಿದ್ದಕ್ಕೆ ಆವಾಜ್ ಹಾಕುತ್ತಿದ್ದ.

ರೊಚ್ಚಿಗೆದ್ದ ಗ್ರಾಮಸ್ಥರು ನಕಲಿ ಸ್ವಾಮಿಜಿಯನ್ನು ಹಿಡಿದು ವೀರಭದ್ರೇಶ್ವರ ದೇವಸ್ಥಾನದಲ್ಲಿ ಕೂಡಿ ಹಾಕಿ ಧರ್ಮದೇಟು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read