ಈಗ ಎಲ್ಲರದ್ದೂ ಒಂದು ರೀತಿಯ ಧಾವಂತದ ಬದುಕು. ಎಲ್ಲವೂ ಬೇಗನೇ ಆಗಿಬಿಡಬೇಕು ಎಂಬ ಹಪಾಹಪಿ. ಕುಳಿತು ಮಾತನಾಡುವುದಕ್ಕೆ, ಇನ್ನೊಬ್ಬರ ಜತೆ ನೋವು ಹಂಚಿಕೊಳ್ಳುವುದಕ್ಕೂ ಸಮಯವಿಲ್ಲದವರ ಹಾಗೇ ವರ್ತಿಸುತ್ತೇವೆ.
ಒಂದೇ ರೀತಿಯ ಒತ್ತಡದ ಬದುಕಿನಿಂದ ಕೆಲವೊಮ್ಮೆ ಜೀವನದ ಮೆಲೆ ವೈರಾಗ್ಯ ಬಂದು ಬಿಡುವ ಸಾಧ್ಯತೆಯೂ ಇರುತ್ತದೆ. ಹಾಗೇ ಈ ಒತ್ತಡದಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತದೆ. ಆದಷ್ಟು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದನ್ನು ಕಲಿಯಬೇಕು.
ಇನ್ನು ಒಂದೇ ರೀತಿಯ ಜೀವನಶೈಲಿಗೆ ಹೊಂದಿಕೊಳ್ಳುವುದರಿಂದ ಬೇಗನೆ ಎಲ್ಲದರ ಮೇಲೂ ಆಸಕ್ತಿ ಹೊರಟು ಹೋಗುತ್ತದೆ. ಆಗಾಗ ಮನಸ್ಸನ್ನು ರಿಫ್ರೇಶ್ ಮಾಡಿಕೊಳ್ಳುತ್ತಾ ಇರಬೇಕು. ಹೇಳಿಕೊಳ್ಳಲಾಗದ ನೋವಿದ್ದರೆ ಆಪ್ತರೊಂದಿಗೆ ಹಂಚಿಕೊಂಡು ನೋವನ್ನು ಮರೆಯಬೇಕು.
ಇನ್ನು ಹಣಕಾಸಿನ ಸಮಸ್ಯೆಯಿದೆ ಎಂದು ತೀರಾ ಜಿಪುಣತನದಿಂದ ಬದುಕುವ ಬದಲು ಆಗಾಗ ಒಮ್ಮೆ ಫ್ಯಾಮಿಲಿ ಜತೆ ಹೊರಗಡೆ ಹೋಗಿ ಕಾಲ ಕಳೆಯಿರಿ. ಆಗ ಇನ್ನಷ್ಟು ಕೆಲಸ ಮಾಡುವ ಹುರುಪು ಬರುತ್ತದೆ. ಜತೆಗೆ ಜೀವನ ಪ್ರೀತಿ ಕೂಡ ಹೆಚ್ಚಾಗುತ್ತದೆ.