ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗುವ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಾರೆ.
ಕುಮಾರಧಾರಾ ನದಿಯ ದಡದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಮಂಗಳೂರಿನಿಂದ ಸುಮಾರು 104 ಕಿಲೋ ಮೀಟರ್ ಹಾಗೂ ಪುತ್ತೂರಿನಿಂದ ಸುಮಾರು 33 ಕಿಲೋ ಮೀಟರ್ ದೂರದಲ್ಲಿದೆ. ಜಿಲ್ಲಾ ಕೇಂದ್ರ ಹಾಗೂ ವಿವಿಧ ಕಡೆಗಳಿಂದ ಸುಬ್ರಹ್ಮಣ್ಯಕ್ಕೆ ಬಸ್ ಸೌಲಭ್ಯವಿದೆ. ಕುಮಾರ ಪರ್ವತ ಹಾಗೂ ಶೇಷ ಪರ್ವತದ ತಪ್ಪಲಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವಿದೆ.
ಭಕ್ತರಿಗೆ ಉಳಿಯಲು ವ್ಯವಸ್ಥೆ ಇದೆ. ಇಲ್ಲಿ ವಿವಿಧ ಪೂಜೆಗಳನ್ನು ನೆರವೇರಿಸಲು ಖ್ಯಾತನಾಮರು, ಜನಸಾಮಾನ್ಯರು ಆಗಮಿಸುತ್ತಾರೆ. ದೇವಾಲಯದಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಭಕ್ತರಿಗೆ ಅನುಕೂಲಕರ ವ್ಯವಸ್ಥೆಗಳನ್ನು ಮಾಡಲಾಗಿದೆ.
ದೇವಾಲಯದ ಜೊತೆಗೆ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಧಾರ್ಮಿಕ ವಿಧಿ ವಿಧಾನಗಳನ್ನು ನೋಡಿದರೆ, ಭಾವಪರವಶರಾಗುವುದು ನಿಶ್ಚಿತ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನವನ್ನೊಮ್ಮೆ ಪಡೆಯಿರಿ.