ಧನವಂತರಾಗಲು ಶನಿವಾರ ಮಾಡಿ ಈ ಚಿಕ್ಕ ಕೆಲಸ

ಶ್ರೀಮಂತರಾಗಲು ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕಾಗಿ ಹಗಲಿರುಳು ಪ್ರಯತ್ನಪಡ್ತಾರೆ. ಆದ್ರೆ ಎಷ್ಟು ಪ್ರಯತ್ನ ಪಟ್ಟರೂ ಯಶಸ್ಸು ಸಿಗೋದು ಕಷ್ಟ. ಕೆಲವರ ಕೈನಲ್ಲಿ ಹಣ ಬಂದ್ರೂ ನಿಲ್ಲೋದಿಲ್ಲ. ಕೆಲವರಿಗೆ ಲಕ್ಷ್ಮಿ ಒಲಿಯುವುದೇ ಇಲ್ಲ. ಬೇಗ ಶ್ರೀಮಂತರಾಗಲು ಬಯಸುವವರು ಒಂದು ಉಪಾಯವನ್ನು ಪಾಲಿಸಿದ್ರೆ ಸಾಕು. ಈ ಉಪಾಯವನ್ನು ಶನಿವಾರವೇ ಮಾಡಬೇಕು.

ಸಾಮಾನ್ಯವಾಗಿ ಶನಿವಾರ ಸಂಜೆ ಪ್ರತಿಯೊಬ್ಬ ಮನುಷ್ಯನ ಅದೃಷ್ಟ, ದುರಾದೃಷ್ಟ ಬದಲಾಗುವ ಸಮಯ. ಹಾಗಾಗಿ ಈ ಉಪಾಯವನ್ನು ಶನಿವಾರ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗೋದ್ರಲ್ಲಿ ಎರಡು ಮಾತಿಲ್ಲ.

ಪ್ರತಿ ಶನಿವಾರ ಶನಿದೇವರ ಪೂಜೆ ಮಾಡಬೇಕು. ನಂತ್ರ ಓಂ ಶಾ ಶನೇಶ್ವರಾಯ ನಮಃ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಪ್ರತಿ ಶನಿವಾರ ಈ ಕೆಲಸ ಮಾಡುವುದ್ರಿಂದ ಕೆಲಸದಲ್ಲಿ ಅಭಿವೃದ್ಧಿಯಾಗಿ ಧನಾಗಮನವಾಗುತ್ತದೆ.

ಶನಿವಾರ ಸಂಜೆ ಶುಭ ಗಳಿಗೆಯಲ್ಲಿ ಆಲದ ಮರದ ಒಂದು ಎಲೆಯನ್ನು ಕೀಳಬೇಕು. ಅದನ್ನು ಶುದ್ಧ ನೀರಿನಲ್ಲಿ ತೊಳೆದು ಕೆಂಪು ರೇಷ್ಮೆ ದಾರವನ್ನು ಸುತ್ತಿ ಹರಿಯುವ ನೀರಿನಲ್ಲಿ ಬಿಡಬೇಕು. ದಾರ ಸುತ್ತುವ ವೇಳೆ ಪ್ರಾರ್ಥನೆ ಮಾಡಿಕೊಳ್ಳಬೇಕು. ಹೀಗೆ ಮಾಡಿದ್ರೆ ಇಷ್ಟಾರ್ಥ ಸಿದ್ಧಿಯಾಗಲಿದೆ ಎಂದು ನಂಬಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read