ದೇಹದ ಬೊಜ್ಜು ಕರಗಿಸಲು ಹೋಗಿ ಈ ತಪ್ಪು ಮಾಡಿದ್ರೆ, ಅನಾರೋಗ್ಯಕ್ಕೆ ತುತ್ತಾಗುತ್ತೀರಿ ಎಚ್ಚರ…..!

ಬೊಜ್ಜು ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಇದರಿಂದ ತೂಕ ಹೆಚ್ಚಳವಾಗುತ್ತದೆ. ಈ ಬೊಜ್ಜನ್ನು ಕರಗಿಸಲು ಜನರು ಹರಸಾಹಸ ಮಾಡುತ್ತಾರೆ. ಆದರೆ ಅವರು ಬೊಜ್ಜು ಕರಗಿಸಲು ಮಾಡುವ ಕೆಲವೊಂದು ತಪ್ಪುಗಳು ಅವರ ದೇಹದ ಮೇಲೆ ಪರಿಣಾಮ ಬೀರುತ್ತದೆ.

*ಕ್ಯಾಲೋರಿ : ತೂಕ ಇಳಿಸಲು ಕೆಲವರು ಕ್ಯಾಲೋರಿ ಆಹಾರಗಳನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

*ಕೊಬ್ಬು : ದೇಹದ ಆರೋಗ್ಯಕ್ಕೆ ಕನಿಷ್ಟ ಪ್ರಮಾಣದ ಕೊಬ್ಬು ಅಗತ್ಯ. ಆದರೆ ದೇಹದಲ್ಲಿ ಬೊಜ್ಜು ಬೆಳೆಯಲು ಪ್ರಮುಖ ಕಾರಣ ಕೊಬ್ಬು. ಹಾಗಾಗಿ ಕೆಲವರು ಬೊಜ್ಜನ್ನು ಕಡಿಮೆ ಮಾಡಲು ಕೊಬ್ಬಿನ ಆಹಾರದಿಂದ ದೂರವಿರುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ ಕಾಡಬಹುದು.

*ಕೆಲವರು ಬೊಜ್ಜನ್ನು ಕರಗಿಸಲು ಆಹಾರವನ್ನು ಸೇವಿಸುವುದನ್ನು ತಪ್ಪಿಸುತ್ತಾರೆ. ಇದರಿಂದ ದೇಹಕ್ಕೆ ಪೋಷಕಾಂಶಗಳ ಕೊರತೆಯಾಗಿ ಅನಾರೋಗ್ಯಕ್ಕೆ ತುತ್ತಾಗಬಹುದು.

*ಬೊಜ್ಜು ಕಡಿಮೆ ಮಾಡಲು ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳು ಒಂದು ಉತ್ತಮ ಮಾರ್ಗ. ಆದರೆ ಕೆಲವರು ಬೊಜ್ಜು ಕರಗಿಸಲು ಅತಿಯಾಗಿ ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆಗಳನ್ನು ಮಾಡುತ್ತಾರೆ. ಇದರಿಂದ ದೇಹ ಶಕ್ತಿ ಕಳೆದುಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read