ಕೇವಲ ಬಿಸಿ ನೀರು ಕುಡಿಯುವುದರಿಂದ ದೇಹ ತೂಕ ಇಳಿಸಬಹುದು ಎಂಬ ಮಾತನ್ನು ನೀವು ಕೇಳಿರಬಹುದು. ಇದರ ಸತ್ಯಾಸತ್ಯತೆ ಬಗ್ಗೆ ನಿಮಗೆಷ್ಟು ತಿಳಿದಿದೆ….?
ದೇಹ ಸಮರ್ಥವಾಗಿ ಕಾರ್ಯನಿರ್ವಹಿಸಬೇಕಾದರೆ ವ್ಯಕ್ತಿ ದಿನಕ್ಕೆ ಕನಿಷ್ಟ ಎರಡರಿಂದ ಮೂರು ಲೀಟರ್ ನೀರು ಕುಡಿಯುವುದು ಅತ್ಯವಶ್ಯಕ. ದೇಹ ತೂಕ ಇಳಿಸುವ ನಿಟ್ಟಿನಲ್ಲಿ ತಣ್ಣೀರು ಹಾಗೂ ಬಿಸಿ ನೀರಿನ ಮಧ್ಯೆ ಇರುವ ಪ್ರಮುಖ ವ್ಯತ್ಯಾಸಗಳನ್ನು ತಿಳಿಯೋಣ.
ವರ್ಕೌಟ್ ನಂತರ ದೇಹವನ್ನು ತಣ್ಣಗಾಗಿಸಲು ಒಂದು ಲೋಟ ತಣ್ಣೀರು ಬೇಕು. ಆದರೆ ದೇಹದಿಂದ ಟಾಕ್ಸಿನ್ ಹೊರಹಾಕಲು ಬಿಸಿ ನೀರೇ ಬೇಕು. ಅಲ್ಲದೆ ಬಿಸಿ ನೀರು ನಿಮ್ಮ ಜೀರ್ಣಕ್ರಿಯೆಯೂ ಸರಾಗವಾಗಿ ನಡೆಯುವಂತೆ ಮಾಡುತ್ತದೆ.
ಹೆಚ್ಚು ನೀರು ಕುಡಿಯುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ಪೋಷಕಾಂಶಗಳು ದೇಹಕ್ಕೆ ಸೇರುತ್ತವೆ ಮತ್ತು ವಿಷಕಾರಿ ತ್ಯಾಜ್ಯಗಳು ಹೊರಹೋಗುತ್ತವೆ.
ಊಟಕ್ಕೆ ಅರ್ಧ ಗಂಟೆ ಮೊದಲು ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಊಟ ಹೆಚ್ಚು ಸೇರುವುದಿಲ್ಲ. ಇದರಿಂದ ಫ್ಯಾಟ್ ಬರ್ನ್ ಸಾಧ್ಯ ಎಂಬುದನ್ನು ಸಂಶೋಧನೆಯೊಂದು ದೃಢಪಡಿಸಿದೆ.