ದೇವೇಗೌಡರ ಕುಟುಂಬದವರು ಮಾತ್ರ ರಾಜಕಾರಣದಲ್ಲಿದ್ದಾರಾ ? ಅಮಿತ್ ಶಾ ಗೆ HDK ಪ್ರಶ್ನೆ

ಜೆಡಿಎಸ್ ಕುಟುಂಬ ರಾಜಕಾರಣದ ಕುರಿತು ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ದೇವೇಗೌಡರ ಕುಟುಂಬದವರು ಮಾತ್ರ ರಾಜಕಾರಣದಲ್ಲಿದ್ದಾರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಇಂದು ಎಲ್ಲ ಪಕ್ಷಗಳಲ್ಲೂ ಅಪ್ಪ – ಮಕ್ಕಳು ರಾಜಕಾರಣದಲ್ಲಿರುವ ಉದಾಹರಣೆ ಇದೆ. ಇದು ಬಿಹಾರ ಅಥವಾ ಉತ್ತರ ಪ್ರದೇಶ ಅಲ್ಲ. ಕರ್ನಾಟಕಕ್ಕೆ ಕೇಂದ್ರದ ಕೊಡುಗೆ ಏನು ಎಂಬುದನ್ನು ಅಮಿತ್ ಶಾ ಹೇಳಲಿ ಎಂದು ಸವಾಲು ಹಾಕಿದರು.

ನಮಗೆ ಯಾರದ್ದೇ ಸರ್ಟಿಫಿಕೇಟ್ ಬೇಡ. ಜನರಿಗೆ ಸ್ಪಂದಿಸಿ ನಾವು ರಾಜಕಾರಣ ಮಾಡುತ್ತಿದ್ದೇವೆ. ಅವರ ದುರಹಂಕಾರಕ್ಕೆ ಸದ್ಯದಲ್ಲೇ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read