ವಿನಾಕಾರಣ ಒತ್ತಡ, ದುಃಸ್ವಪ್ನ, ಭ್ರಮೆಯಿಂದ ಕೆಲವರು ಸರಿಯಾಗಿ ನಿದ್ರೆ ಮಾಡುವುದಿಲ್ಲ. ಒತ್ತಡ ಕಡಿಮೆ ಮಾಡಿಕೊಳ್ಳಲು ಜನರು ಪ್ರತಿ ದಿನ ಧ್ಯಾನ ಮಾಡಬೇಕು. ಇದ್ರ ಜೊತೆಗೆ ದುಃಸ್ವಪ್ನ ಹಾಗೂ ಭ್ರಮೆ ಕಡಿಮೆ ಮಾಡಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲ ಉಪಾಯಗಳನ್ನು ಹೇಳಲಾಗಿದೆ.
ಬೆಳಿಗ್ಗೆ ಎದ್ದಾಗಿನಿಂದ ರಾತ್ರಿಯವರೆಗೆ ಶುಭ ಕೆಲಸಗಳನ್ನು ಮಾಡಬೇಕು. ರಾತ್ರಿ ಮಲಗುವ ಮೊದಲು ನಾಲ್ಕು ಶುಭ ಕೆಲಸಗಳನ್ನು ಮಾಡಬೇಕು. ಇದ್ರಿಂದ ಭಯ ದೂರವಾಗಿ ನೆಮ್ಮದಿಯ ನಿದ್ರೆ ಬರುತ್ತದೆ.
ಮಲಗುವ ಮೊದಲು ಕೋಣೆಯಲ್ಲಿ ಎಳ್ಳಿನ ಎಣ್ಣೆ ದೀಪವನ್ನು ಹಚ್ಚಬೇಕು. ಹೀಗೆ ಮಾಡಿದಲ್ಲಿ ಮನಸ್ಸಿನಲ್ಲಿರುವ ನಕಾರಾತ್ಮಕತೆ ದೂರವಾಗುತ್ತದೆ.
ಕಲಿಯುಗದಲ್ಲಿ ಅತಿ ಬೇಗ ಪ್ರಸನ್ನನಾಗುವ ದೇವರೆಂದರೆ ಹನುಮಂತ. ಹನುಮಂತನ ಪೂಜೆ ಮಾಡುವುದ್ರಿಂದ ಎಲ್ಲ ರೀತಿಯ ಭಯ ದೂರವಾಗುತ್ತದೆ. ಮಲಗುವ ಮೊದಲು ಹನುಮಾನ್ ಚಾಲೀಸ್ ಪಠಣ ಮಾಡಿ. ಭಗವಂತನ ಅನುಗ್ರಹದಿಂದ ಸಮಸ್ಯೆ ದೂರವಾಗುತ್ತದೆ.
ಕರ್ಪೂರದಲ್ಲಿ ನಕಾರಾತ್ಮಕ ಶಕ್ತಿ ತೊಡೆದು ಹಾಕುವ ಶಕ್ತಿಯಿದೆ. ಮಲಗುವ ಮೊದಲು ಕೋಣೆಯಲ್ಲಿ ಕರ್ಪೂರವನ್ನು ಹಚ್ಚಿ. ಇದು ವಾತಾವರಣದ ಜೊತೆ ಮನಸ್ಸನ್ನು ಶಾಂತಗೊಳಿಸುತ್ತದೆ.
ನಿಮಗಿಷ್ಟವಾಗುವ ದೇವರ ಜಪ ಮಾಡಿ. ಮಂತ್ರವನ್ನು ಸುಮಾರು 108 ಬಾರಿ ಪಠಿಸಿ. ಕೆಟ್ಟ ಕನಸು ದೂರವಾಗುತ್ತದೆ.