ಪನ್ನೀರ್ – 2 ಕಪ್ (ತುರಿದದ್ದು)
ಬೇಯಿಸಿರುವ ಅನ್ನ – 1/2 ಕಪ್
ಹಸಿ ಮೆಣಸಿನಕಾಯಿ – 1 1/2 ಟೀ ಚಮಚ (ಸಣ್ಣಗೆ ಹೆಚ್ಚಿದ್ದು)
ಮೈದಾ – 1/4 ಕಪ್
ಕೊತ್ತಂಬರಿ ಸೊಪ್ಪು – 1/4 ಟೀ ಚಮಚ (ಸಣ್ಣಗೆ ಹೆಚ್ಚಿದ್ದು)
ದಪ್ಪ ಮೆಣಸಿನಕಾಯಿ – 1/2 ಕಪ್ ವಿವಿಧ ಬಣ್ಣದ್ದು (ಸಣ್ಣಗೆ ಹೆಚ್ಚಿದ್ದು)
ಬ್ರೆಡ್ ಕ್ರಂಬ್ಸ್ ಅದ್ದುವುದಕ್ಕೆ
ಎಣ್ಣೆ – 2 ಟೇಬಲ್ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ತುರಿದ ಪನ್ನೀರ್ ಅನ್ನು ತೆಗೆದುಕೊಂಡು ಅದಕ್ಕೆ ಬೇಯಿಸಿದ ಅನ್ನವನ್ನು ಹಾಕಿ. ಈಗ ಅದಕ್ಕೆ ಮೈದಾ ಹಿಟ್ಟು, ಉಪ್ಪು, ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ. ನಂತರ ಕೊತ್ತಂಬರಿ ಸೊಪ್ಪು, ಹೆಚ್ಚಿದ ದಪ್ಪ ಮೆಣಸಿನಕಾಯಿ ಹಾಕಿ ಕಲಸಿ. ವಿವಿಧ ಬಣ್ಣಗಳ ದಪ್ಪ ಮೆಣಸಿನಕಾಯಿ ಬಳಸಿದರೆ, ಕಟ್ಲೆಟ್ ಅಂದವಾಗಿ ಕಾಣುತ್ತದೆ. ಎಲ್ಲಾ ಸಾಮಗ್ರಿಗಳನ್ನು ಮಿಕ್ಸ್ ಮಾಡಿ ಸಣ್ಣ ಕಟ್ಲೆಟ್ ಅನ್ನು ನಿಮ್ಮ ಕೈಯಿಂದ ಮಾಡಿರಿ.
ಈಗ ಒಂದು ತವ ಬಿಸಿ ಮಾಡಿ ಎಣ್ಣೆಯನ್ನು ಹಾಕಿರಿ. ತಯಾರಾದ ಕಟ್ಲೆಟ್ ಗಳನ್ನು ಬ್ರೆಡ್ ಕ್ರಂಬ್ಸ್ ಮೇಲೆ ಹೊರಳಿಸಿ ತವ ಮೇಲಿಟ್ಟು ಹೊಂಬಣ್ಣ ಬರುವವರೆಗೂ ಬೇಯಿಸಿ. ಎಲ್ಲಾ ಬದಿಗಳಲ್ಲೂ ಬೆಂದ ನಂತರ ಬಿಸಿಬಿಸಿಯಾದ ಕಟ್ಲೆಟ್‌ಗಳನ್ನು ಟೊಮೇಟೋ ಸಾಸ್ ಜೊತೆ ಅಥವಾ ಪುದೀನ ಚಟ್ನಿಯ ಜೊತೆ ಸವಿಯಲು ಕೊಡಿ.