![](https://kannadadunia.com/wp-content/uploads/2020/08/images-1-1-1.jpg)
ದಾಳಿಂಬೆ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಹಲವು ಪೋಷಕಾಂಶಗಳು ಸಿಗುತ್ತವೆ ಮತ್ತು ಈ ಹಣ್ಣಿಗೆ ಮಲಬದ್ಧತೆ ನಿವಾರಿಸುವ ಶಕ್ತಿ ಇದೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಈ ಹಣ್ಣಿನ ಎಲೆಗಳಿಂದಲೂ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ…?
ಆಯುರ್ವೇದದಲ್ಲಿ ದಾಳಿಂಬೆ ಗಿಡದ ಎಲೆಗಳನ್ನೂ ಮದ್ದಾಗಿ ಬಳಸಲಾಗುತ್ತದೆ. ಚಿಕ್ಕದಾಗಿರುವ ಇದರ ಎಲೆಗಳಿಂದ ರಸ ಹಿಂಡುವುದು ಪ್ರಯಾಸದ ಕೆಲಸವೂ ಹೌದು. ಕಾಮಾಲೆ, ಹೊಟ್ಟೆನೋವು, ನಿದ್ರಾಹೀನತೆ ಮೊದಲಾದ ರೋಗಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
ಮಾಮೂಲಿ ಕೆಮ್ಮು ಮತ್ತು ಶೀತದ ನಿವಾರಣೆಗೆ ದಾಳಿಂಬೆ ಎಲೆಗಳನ್ನು ಕುದಿಸಿ, ಸೋಸಿ ತಣಿಸಿ ಸಂಗ್ರಹಿಸಿಡಿ. ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಕೆಮ್ಮಿನೊಂದಿಗೆ ಕಫದ ಸಮಸ್ಯೆಯೂ ದೂರವಾಗುತ್ತದೆ.
ನಿದ್ರಾಹೀನತೆ ಸಮಸ್ಯೆಯನ್ನೂ ಇದು ನಿವಾರಿಸುತ್ತದೆ. ತುರಿಕೆ ಸಮಸ್ಯೆಯನ್ನೂ ಇದು ದೂರ ಮಾಡುತ್ತದೆ. ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ದಪ್ಪನೆಯ ಲೇಹಕ್ಕೆ ತುಸುವೇ ಅರಿಶಿನ ಉದುರಿಸಿ ತುರಿಕೆ ಇರುವಲ್ಲಿಗೆ ಲೇಪಿಸಿಕೊಳ್ಳಿ. ತುರಿಕೆ ಮತ್ತು ಉರಿಯಿಂದ ಇದು ಮುಕ್ತಿ ನೀಡುತ್ತದೆ. ದಿನಕ್ಕೆರಡು ಬಾರಿ ಬಳಸಿ. ಹಚ್ಚುವ ಮುನ್ನ ಉಪ್ಪು ನೀರಿನಲ್ಲಿ ಆ ಭಾಗವನ್ನು ತೊಳೆದುಕೊಳ್ಳಿ. ಯಾವುದೇ ಕಾರಣಕ್ಕೂ ಉಗುರನ್ನು ತಾಗಿಸದಿರಿ.