ದಾಲ್ಚಿನಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಮೊಡವೆ, ಕಪ್ಪು ಕಲೆ, ಸುಕ್ಕುಗಳ ವಿರುದ್ಧ ಹೋರಾಡುತ್ತದೆ. ನಿಮ್ಮ ಚರ್ಮದ ಪ್ರಕಾರ ನಿಮ್ಮ ಸೌಂದರ್ಯ ವೃದ್ಧಿಸಿಕೊಳ್ಳಲು ದಾಲ್ಚಿನಿಯನ್ನು ಹೇಗೆ ಬಳಸಿಕೊಳ್ಳಲು ಎಂಬುದನ್ನು ತಿಳಿಯಿರಿ.
- ಎಣ್ಣೆಯುಕ್ತ ಚರ್ಮದವರು ಮೊಡವೆಗಳ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ದಾಲ್ಚಿನಿಯನ್ನು ಬಳಸುವುದರಿಂದ ಅವರ ಈ ಸಮಸ್ಯೆ ನಿವಾರಣೆಯಾಗುತ್ತದೆ. 1 ಚಮಚ ದಾಲ್ಚಿನಿ ಪುಡಿಗೆ 3 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.
- ಒಣ ಚರ್ಮದ ಸಮಸ್ಯೆ ಇರುವವರ ಚರ್ಮ ಯಾವಾಗಲೂ ತೇವಾಂಶವನ್ನು ಕಳೆದುಕೊಂಡು ಡ್ರೈ ಆಗಿ ಕಾಂತಿಯನ್ನು ಕಳೆದುಕೊಳ್ಳುತ್ತದೆ. ದಾಲ್ಚಿನಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಇದರಿಂದ ನಿಮ್ಮ ಮುಖ ಹೊಳೆಯುತ್ತದೆ. ಹಾಗಾಗಿ 1 ಚಮಚ ಬಾಳೆಹಣ್ಣಿನ ಪೇಸ್ಟ್ ಗೆ 1 ಚಮಚ ಮೊಸರು, ½ ಚಮಚ ದಾಲ್ಚಿನಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿ ತೇವಾಂಶಗೊಂಡು ಹೊಳಪಿನಿಂದ ಕೂಡಿರುತ್ತದೆ.
- ಎಣ್ಣೆ ಮತ್ತು ಒಣ ಚರ್ಮ ಹೊಂದಿರುವವರು 2 ಚಮಚ ಆಲಿವ್ ಆಯಿಲ್ ಅಥವಾ ತೆಂಗಿನೆಣ್ಣೆಗೆ 1 ಚಮಚ ದಾಲ್ಚಿನಿ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಿ ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ.