ತೆಂಗಿನ ಹಾಲನ್ನು ಹೆಚ್ಚಾಗಿ ವಿಧವಿಧವಾದ ಅಡುಗೆಗಳನ್ನು ತಯಾರಿಸಲು ಬಳಸುತ್ತಾರೆ. ಇದು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಇದನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅದು ಯಾವುದೆಂಬುದನ್ನು ತಿಳಿದುಕೊಳ್ಳೋಣ.
*ತೆಂಗಿನ ಹಾಲನ್ನು ಸೇವಿಸುವುದರಿಂದ ಅತಿಯಾಗಿ ತಿನ್ನಬೇಕು ಎನ್ನುವ ಬಯಕೆಯನ್ನು ನಿಯಂತ್ರಿಸಬಹುದು. ಇದರಿಂದ ಬೊಜ್ಜು ಕಡಿಮೆಯಾಗುತ್ತದೆ.
*ದೇಹದ ಉಷ್ಣತೆಯಿಂದ ಬಾಯಿಯಲ್ಲಿ ಗುಳ್ಳೆಗಳಾಗಿದ್ದರೆ ತೆಂಗಿನ ಹಾಲನ್ನು ಸೇವಿಸಿ. ಇದರಿಂದ ಗುಳ್ಳೆಗಳು ನಿವಾರಣೆಯಾಗುತ್ತದೆ.
*ಇದು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗ ಅಪಾಯದಿಂದ ದೂರವಿರಿಸುತ್ತದೆ.
*ತೆಂಗಿನ ಹಾಲನ್ನು ಬಳಸುವುದರಿಂದ ಚರ್ಮ ಮೃದುವಾಗುತ್ತದೆ. ವಯಸ್ಸಾದ ಸಮಸ್ಯೆಗಳು ಕಾಡುವುದಿಲ್ಲ, ಹಾಗೇ ತಲೆಹೊಟ್ಟು, ತುರಿಕೆ ಸಮಸ್ಯೆಯನ್ನು ದೂರಮಾಡಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.