ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ತೆಂಗಿನ ಮರದ ಪ್ರತಿ ಭಾಗವೂ ಉಪಯೋಗಕಾರಿ.
ಇತ್ತೀಚೆಗೆ ತೆಂಗಿನ ಚಿಪ್ಪಿನಿಂದ ಅನೇಕ ಕಲಾಕೃತಿಗಳನ್ನು ಮಾಡಿ ಲಾಭ ಗಳಿಸುತ್ತಿರುವವರನ್ನು ನೀವು ಗಮನಿಸಿರಬಹುದು.
ಕಾಯಿ ತುರಿದ ನಂತರ ಚಿಪ್ಪಿನಿಂದ ಏನೂ ಪ್ರಯೋಜನವಿಲ್ಲ ಎಂದು ಕಸಕ್ಕೆ ಹಾಕುವ ಮುನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ಸಾಕಷ್ಟಿದೆ.
ತೆಂಗಿನ ಚಿಪ್ಪನ್ನು ಸುಟ್ಟು ಅದರ ಬೂದಿಯನ್ನು ಜರಡಿಯಲ್ಲಿ ಸೋಸಿದ ನಂತರ ದೊರೆತ ನುಣ್ಣನೆಯ ಪುಡಿಯನ್ನು ತೆಂಗಿನ ಎಣ್ಣೆಯ ಜೊತೆ ತಲೆಗೆ ಹಚ್ಚಿದರೆ ಕೂದಲು ಉದುರುವ, ತಲೆ ಹೊಟ್ಟಿನ ಸಮಸ್ಯೆಗೆ ಗುಡ್ ಬೈ ಹೇಳಿದ ಹಾಗೆ.
ಇನ್ನೂ ಇದೇ ತೆಂಗಿನ ಚಿಪ್ಪಿನ ಬೂದಿಗೆ ಸ್ವಲ್ಪ ಉಪ್ಪು ಹಾಗೂ ಬೇವಿನ ಎಣ್ಣೆ ಬೆರೆಸಿ ನಿಯಮಿತವಾಗಿ ಹಲ್ಲುಜ್ಜಿದರೆ ದಂತಕ್ಷಯ ಸಮಸ್ಯೆಯೂ ಬರುವುದಿಲ್ಲ.