ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಹಲವು ದಾರಿಗಳಿವೆ.
ಅವುಗಳಲ್ಲಿ ಸೈಕ್ಲಿಂಗ್ ಕೂಡಾ ಒಂದು. ಕಡಿಮೆ ಬಂಡವಾಳ ಹೂಡಿ ಜಿಮ್ ನ ಪ್ರಯೋಜನ ಪಡೆಯಲು ಬಯಸುವವರಿಗೆ ಸೈಕ್ಲಿಂಗ್ ಹೇಳಿ ಮಾಡಿಸಿದ ವಿಧಾನ.
ಮನೆಯಿಂದ ಕಚೇರಿ ಸಮೀಪದಲ್ಲಿದ್ದರೆ, ತುಸು ದೂರದಲ್ಲೇ ಹಾಲು ಅಥವಾ ಹಣ್ಣು, ತರಕಾರಿ ತರಲು ಹೋಗುವವರಾದರೆ ಬೈಕ್ ಅಥವಾ ಕಾರು ತೆಗೆಯುವ ಬದಲು ಸೈಕಲ್ ಬಳಸಿ. ಇದರಿಂದ ಪರಿಸರಕ್ಕೂ ಒಳ್ಳೆಯದು, ಇಂಧನವೂ ಉಳಿಯುತ್ತದೆ ಮಾತ್ರವಲ್ಲ ದೇಹಕ್ಕೂ ಉತ್ತಮ ವ್ಯಾಯಾಮ ದೊರೆತಂತಾಗುತ್ತದೆ.
ಲಾಕ್ ಡೌನ್ ಸಡಿಲಿಕೆಗೊಂಡು ಜಿಮ್ ಗಳು ತೆರೆದಿದ್ದರೂ ಒಮ್ಮೆಗೇ ಹೋಗುವ ಭಯವಿದ್ದರೆ ಸೈಕ್ಲಿಂಗ್ ನಿಮಗೆ ಅತ್ಯುತ್ತಮ ಆಯ್ಕೆಯಾಗಬಲ್ಲದು. ಇದರಿಂದ ದೇಹದ ಕ್ಯಾಲರಿಯೂ ಕರಗುತ್ತದೆ.
ಹತ್ತು ನಿಮಿಷ ಸೈಕಲ್ ತುಳಿದು ದೇಹ ತೂಕ ಇಳಿಸಲು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ಬದ್ಧತೆ ಬೇಕು. ಕನಿಷ್ಠ 30 ನಿಮಿಷ ಸೈಕಲ್ ಚಲಾಯಿಸಬೇಕು. ಒಂದು ಗಂಟೆ ಸೈಕಲ್ ತುಳಿದರೆ ಬಹಳ ಒಳ್ಳೆಯದು. ಎಷ್ಟು ವೇಗವಾಗಿ ಸೈಕಲ್ ತುಳಿಯುತ್ತೀರೋ ಅಷ್ಟು ನಿಮ್ಮ ಹೃದಯ ಆರೋಗ್ಯ ಉತ್ತಮವಾಗಿರುತ್ತದೆ.
ಸೈಕ್ಲಿಂಗ್ ಬಳಿಕ ಸಾಕಷ್ಟು ನೀರು ಕುಡಿಯಿರಿ. ಸಾಕಷ್ಟು ಹಣ್ಣು – ತರಕಾರಿಗಳನ್ನು ತಿನ್ನಿ. ಗ್ರಿಲ್ ಚಿಕನ್, ಮೊಟ್ಟೆ, ಅನ್ನ, ತರಕಾರಿ, ಗೆಣಸು, ಒಣಹಣ್ಣುಗಳನ್ನು ಸೇವಿಸಿ.