ಸಂಜೆ ಸಮಯದಲ್ಲಿ ಜನರು ಟೀ ಅಥವಾ ಕಾಫಿ ಸೇವಿಸ್ತಾರೆ. ಕಾಫಿ ಜೊತೆ ರುಚಿಯಾದ ತಿಂಡಿಯನ್ನು ಬಾಯಿ ಬಯಸುತ್ತದೆ. ಪ್ರತಿ ದಿನ ಬಜ್ಜಿ ತಿಂದು ಬೇಸರವಾಗಿರುವವರು ಜೇನುತುಪ್ಪದಲ್ಲಿ ರೋಸ್ಟ್ ಮಾಡಿದ ಆಲೂಗಡ್ಡೆಯ ಸವಿ ನೋಡಬಹುದು.
ಜೇನುತುಪ್ಪದ ಸ್ವೀಟ್ ಆಲೂಗಡ್ಡೆ ರೋಸ್ಟ್ ಮಾಡಲು ಬೇಕಾಗುವ ವಸ್ತುಗಳು :
ಸಿಹಿ ಆಲೂಗಡ್ಡೆ : 3
ಜೇನುತುಪ್ಪ : ½ ಚಮಚ
ಉಪ್ಪು : 1 ಚಮಚ
ಆಲಿವ್ ಆಯಿಲ್ : 1 ಚಮಚ
ರೋಸ್ಟೆಡ್ ನಟ್ಸ್ : ¼ ಕಪ್
ಜೇನುತುಪ್ಪದ ಸ್ವೀಟ್ ಆಲೂಗಡ್ಡೆ ರೋಸ್ಟ್ ಮಾಡುವ ವಿಧಾನ :
ಆಲೂಗಡ್ಡೆ ಬಿಟ್ಟು ಮತ್ತೆಲ್ಲ ಸಾಮಗ್ರಿಗಳನ್ನು ಮಿಕ್ಸ್ ಮಾಡಿ. ನಂತ್ರ ಆಲೂಗಡ್ಡೆ ಸ್ಲೈಸ್ ಮಾಡಿ, ಮಿಶ್ರಣದಲ್ಲಿ ಆಲೂಗಡ್ಡೆ ತುಂಡುಗಳನ್ನು ಅದ್ದಿ. ನಂತ್ರ ಓವನ್ ನಲ್ಲಿ 30 ನಿಮಿಷಗಳ ಕಾಲ 170 ಡಿಗ್ರಿಯಲ್ಲಿ ಬೇಯಿಸಿ. ಬಿಸಿಬಿಸಿ ಜೇನುತುಪ್ಪದಲ್ಲಿ ರೋಸ್ಟ್ ಆದ ಆಲೂಗಡ್ಡೆ ಸ್ಲೈಸ್ ರೆಡಿ.