ತಲೆ ಹೊಟ್ಟು ಕೂದಲನ್ನು ಹಾನಿಗೊಳಿಸುವುದು ಮಾತ್ರವಲ್ಲದೇ ತುರಿಕೆಗೆ ಕಾರಣವಾಗುತ್ತದೆ. ಇದರಿಂದ ಕೂದಲು ಉದುರುತ್ತದೆ. ಹಾಗಾಗಿ ಈ ತರಕಾರಿಯನ್ನು ಬಳಸಿ ತಲೆಹೊಟ್ಟನ್ನು ನಿವಾರಿಸಿಕೊಳ್ಳಿ.
ಪಡುವಲಕಾಯಿ ಇದು ತಲೆ ಹೊಟ್ಟನ್ನು ನಿವಾರಿಸಲು ಸಹಕಾರಿ. ಇದರಲ್ಲಿರುವ ಪೋಷಕಾಂಶ ತಲೆಹೊಟ್ಟಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಹಾಗಾಗಿ ಪಡುವಲಕಾಯಿ ಮತ್ತು ಅದರ ಬೀಜವನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿ ಅದರಿಂದ ರಸ ತೆಗೆಯಿರಿ.
ಈ ರಸವನ್ನು ಹತ್ತಿಯ ಸಹಾಯದಿಂದ ನೆತ್ತಿಯ ಮೇಲೆ ಹಚ್ಚಿ ಸುಮಾರು 30 ನಿಮಿಷಗಳ ಕಾಲ ಬಿಟ್ಟು ಬಳಿಕ ಹರ್ಬಲ್ ಶಾಂಪು ಬಳಸಿ ಕೂದಲನ್ನು ವಾಶ್ ಮಾಡಿ. ಈ ಪ್ರಕ್ರಿಯೆಯನ್ನು ವಾರಕ್ಕೊಮ್ಮೆ ಮಾಡಿ. ಇದರಿಂದ ನಾಲ್ಕೈದು ವಾರಗಳಲ್ಲೇ ತಲೆಹೊಟ್ಟು ನಿವಾರಣೆಯಾಗಿ ಹೊಳೆಯುವ ಕೂದಲು ನಿಮ್ಮದಾಗುತ್ತದೆ.