ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಸದಸ್ಯರ ನಡುವೆ ಜಗಳ, ವೈಮನಸ್ಸಿನ ಸಮಸ್ಯೆ ಕಾಡುತ್ತದೆ. ಅದರಲ್ಲೂ ಈ ವಾಸ್ತುವಿನ ದೋಷ ತಂದೆ ಹಾಗೂ ಮಗನ ಸಂಬಂಧವನ್ನು ಹಾಳು ಮಾಡುತ್ತದೆ. ಅವರ ಮಧ್ಯೆ ಪದೇ ಪದೇ ಜಗಳವಾಗುವಂತೆ ಮಾಡುತ್ತದೆ. ಆದ ಕಾರಣ ಅದು ಏನೆಂಬುದನ್ನು ತಿಳಿದು ಅದನ್ನು ಪರಿಹರಿಸಿಕೊಳ್ಳಿ.
ವಾಸ್ತು ಶಾಸ್ತ್ರದ ಪ್ರಕಾರ ತಂದೆ ಮತ್ತು ಮಗನ ನಡುವಿನ ಜಗಳಕ್ಕೆ ದೊಡ್ಡ ಕಾರಣವೆಂದರೆ ಅದು ಮನೆಯ ಈಶಾನ್ಯ ಮೂಲೆಯಲ್ಲಿರುವ ಅಸ್ವಚ್ಚತೆ. ಈ ಮೂಲೆ ಸ್ವಚ್ಚವಾಗಿರದಿದ್ದರೇ ತಂದೆ ಮಗನ ನಡುವೆ ಕಲಹ ಶುರುವಾಗುತ್ತದೆ. ಹಾಗಾಗಿ ಈಶಾನ್ಯ ದಿಕ್ಕನ್ನು ಯಾವಾಗಲೂ ಸ್ವಚ್ಚವಾಗಿಡಿ. ಈ ದಿಕ್ಕಿನಲ್ಲಿ ಕಸವನ್ನು ಶೇಖರಿಸಬೇಡಿ.