ಭಾರತದಲ್ಲಿ ಈಗ ಎಲೆಕ್ಟ್ರಿಕ್ ಕಾರುಗಳ ಹವಾ ಜೋರಾಗಿದೆ. ಬಹುತೇಕ ಕಂಪನಿಗಳು ಡೀಸೆಲ್ ಎಂಜಿನ್‌ಗಳ ಕಾರುಗಳನ್ನು ತಯಾರಿಸುವುದನ್ನು ನಿಲ್ಲಿಸಿಬಿಟ್ಟಿವೆ. ಹೊಸ ನಿಯಮಗಳ ಅಡಿಯಲ್ಲಿ ಎಂಜಿನ್ ಅನ್ನು ನವೀಕರಿಸಬೇಕಾಗಿತ್ತು. ಇದು ಪೆಟ್ರೋಲ್ ಎಂಜಿನ್‌ಗಿಂತ ಸ್ವಲ್ಪ ದುಬಾರಿಯಾಗುವ ಕಾರಣ ಕಂಪನಿಗಳು ಅದನ್ನು ಮಾಡಲು ಹಿಂದೇಟು ಹಾಕಿವೆ. ಆದರೂ ಅಗ್ಗದ ದರದಲ್ಲಿ ಡೀಸೆಲ್ ಕಾರು ಖರೀದಿಸಲು ಬಯಸುವ ಗ್ರಾಹಕರಿಗೆ ಇನ್ನೂ ಮಾರುಕಟ್ಟೆಯಲ್ಲಿ ಆಯ್ಕೆಗಳು ಲಭ್ಯವಿವೆ. ಭಾರತದಲ್ಲಿ ಕೈಗೆಟುಕುವ ದರದಲ್ಲಿರೋ ಡೀಸೆಲ್ ಕಾರುಗಳನ್ನು ನೋಡೋಣ.
ಟಾಟಾ ಆಲ್ಟ್ರೋಜ್ (ಬೆಲೆ: 8 ಲಕ್ಷ ರೂ.ನಿಂದ ಆರಂಭ)
ಟಾಟಾ ಆಲ್ಟ್ರೊಜ್ ಪ್ರಸ್ತುತ ದೇಶದ ಅತ್ಯಂತ ಅಗ್ಗದ ಡೀಸೆಲ್ ಕಾರು ಮತ್ತು ಡೀಸೆಲ್ ಎಂಜಿನ್ ನೀಡುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದೆ. ಇದು 88.7 Bhp ಮತ್ತು 200 Nm ಉತ್ಪಾದಿಸುವ 1.5-ಲೀಟರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
ಮಹೀಂದ್ರ ಬೊಲೆರೊ/ನಿಯೋ
ಮಹೀಂದ್ರ ಬೊಲೆರೊ ಈಗ ಎರಡು ಮಾದರಿಗಳಲ್ಲಿ ಬರುತ್ತದೆ. ಮಹೀಂದ್ರ ಬೊಲೆರೊ ಬೆಲೆ 9.62 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಬೊಲೆರೊ ನಿಯೋ ಬೆಲೆ 9.78 ಲಕ್ಷದಿಂದ ಪ್ರಾರಂಭ. ಇದು ಅತ್ಯಂತ ಅಗ್ಗದ ಸೀಟರ್ ಡೀಸೆಲ್ ಕಾರು ಕೂಡ ಆಗಿದೆ. ಇದು 1.5-ಲೀಟರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.
ಮಹೀಂದ್ರ XUV300 (ಬೆಲೆ 9.90 ಲಕ್ಷದಿಂದ ಪ್ರಾರಂಭ)
ಇದು ಶಕ್ತಿಯುತ 1.5-ಲೀಟರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ. 115 PS ಮತ್ತು 300 Nm ಅನ್ನು ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ AMT ಆಯ್ಕೆಗಳಲ್ಲಿ ಈ ಕಾರು ಲಭ್ಯವಿದೆ.
ಕಿಯಾ ಸೋನೆಟ್ (ಬೆಲೆ 9.95 ಲಕ್ಷದಿಂದ ಪ್ರಾರಂಭ)
ಇದು ಕಿಯಾ ಕಂಪನಿಯ ಅತ್ಯಂತ ಅಗ್ಗದ ಕಾರು ಮತ್ತು ಉತ್ತಮ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ. 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್-ಕನ್ವರ್ಟರ್ ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆಗಳನ್ನು ಈ ಕಾರು ಹೊಂದಿದೆ.
ಟಾಟಾ ನೆಕ್ಸಾನ್ (ಬೆಲೆ 10 ಲಕ್ಷದಿಂದ ಪ್ರಾರಂಭ)
ಟಾಟಾ ನೆಕ್ಸಾನ್ ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ SUV ಆಗಿದೆ. ಇದು 113.4 Bhp ಮತ್ತು 260 Nm ಉತ್ಪಾದಿಸುವ 1.5-ಲೀಟರ್, ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ನೀವು ಇದನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ AMT ನೊಂದಿಗೆ ಖರೀದಿಸಬಹುದು.