ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಬಯಕೆ ಯಾರಿಗಿರುವುದಿಲ್ಲ ಹೇಳಿ. ಆದರೆ ಆಧುನಿಕ ಪರಿಕರಗಳಾದ ಮೊಬೈಲ್, ಕ್ಯಾಲ್ಕುಲೇಟರ್ ಗಳ ಮಧ್ಯೆ ಮಕ್ಕಳು ತಲೆ ಖರ್ಚು ಮಾಡುವುದನ್ನು ಮರೆತೇ ಬಿಟ್ಟಿರುತ್ತಾರೆ. ಹಾಗಿದ್ದರೆ ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆಂದು ನೋಡೋಣ.
ಆಹಾರ ಮತ್ತು ಔಷಧೀಯ ಗುಣ ಹೊಂದಿರುವ ಜೇನುತುಪ್ಪ ತೆಗೆದುಕೊಳ್ಳಿ. ಗಾಜಿನ ಬಾಟಲ್ ನಲ್ಲಿ ಕಾಲು ಭಾಗ ಜೇನುತುಪ್ಪ ತುಂಬಿ. ಉಳಿದ ಭಾಗಕ್ಕೆ ಉತ್ತಮ ಗುಣಮಟ್ಟದ ಗೋಡಂಬಿ ಹಾಕಿ ಮುಚ್ಚಿಡಿ. ವಾರದ ಅವಧಿಯಲ್ಲಿ ಗೋಡಂಬಿ ಅತ್ಯುತ್ತಮವಾಗಿ ಜೇನನ್ನು ಹೀರಿಕೊಂಡಿರುತ್ತದೆ.
ಬಳಿಕ ಬೆಳಿಗ್ಗೆ ಎದ್ದಾಕ್ಷಣ ಮೂರು ಗೋಡಂಬಿ ಸಹಿತ ಒಂದು ಚಮಚ ಈ ದ್ರಾವಣವನ್ನು ಸೇವನೆ ಮಾಡಿ. ಹತ್ತು ವರ್ಷದ ಒಳಗಿನ ಮಕ್ಕಳಿಗೆ ಎರಡು ಗೋಡಂಬಿ ಸಾಕು. 10 ವರ್ಷ ಮೇಲ್ಪಟ್ಟ ಮಕ್ಕಳಿಗೆ 3-4 ಗೋಡಂಬಿ ಕೊಡಬಹುದು.
ಖಾಲಿಹೊಟ್ಟೆಯಲ್ಲಿ ಇದನ್ನು ಸೇವಿಸಿದ ಬಳಿಕ ಅರ್ಧ ಗಂಟೆ ಹೊತ್ತು ಇತರೆ ಏನನ್ನೂ ಸೇವಿಸದಿರಿ. ಜೇನು ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮಾತ್ರವಲ್ಲ ಸ್ಮರಣ ಶಕ್ತಿಯನ್ನೂ ಹೆಚ್ಚಿಸುತ್ತದೆ. ಗೋಡಂಬಿ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ.
ಈ ಮಿಶ್ರಣದ ರೆಡಿ ಪ್ಯಾಕ್ ಗಳು ಮಳಿಗೆಗಳಲ್ಲಿ ಲಭ್ಯವಿದೆ. ಅವುಗಳ ಗುಣಮಟ್ಟದ ಪರೀಕ್ಷೆ ನಡೆಸುವ ಬದಲು ನೀವು ಈ ಮಿಶ್ರಣವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.