ತೆಂಗಿನೆಣ್ಣೆಯನ್ನು ಸರಿಯಾದ ಕ್ರಮದಲ್ಲಿ ಬಳಸುವುದರಿಂದ ನಿಮ್ಮ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಬಹುದು ಎಂಬುದು ನಿಮಗೆ ಗೊತ್ತೇ?
ತೆಂಗಿನೆಣ್ಣೆ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ದೇಹದ ಕೊಬ್ಬನ್ನು ಕರಗಿಸುತ್ತದೆ. ಕಲ್ಮಶಗಳನ್ನು ಹೊರಹಾಕುತ್ತದೆ. ತೂಕವನ್ನೂ ಕಡಿಮೆ ಮಾಡುತ್ತದೆ.
ಇದರಲ್ಲಿ ಸ್ಯಾಚುರೇಟೆಡ್ ಆಮ್ಲದ ಪ್ರಮಾಣ ಹೆಚ್ಚಿರುವುದರಿಂದ ಹುರಿಯುವ ಕರಿಯುವ ವೇಳೆ ಇದನ್ನು ಬಳಸುವುದು ಬಹಳ ಒಳ್ಳೆಯದು. ದೇಹಕ್ಕೆ ಅಗತ್ಯವಾದ ಉತ್ತಮ ಕೊಲೆಸ್ಟ್ರಾಲ್ ಅನ್ನು ಮಾತ್ರ ಇದು ದೇಹಕ್ಕೆ ಒದಗಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಹೃದಯದ ರಕ್ಷಣೆ ಮಾಡಿ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಮಧುಮೇಹ ನಿಯಂತ್ರಣಕ್ಕೂ ಇದು ಸಹಕಾರಿ ಎಂಬುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ. ಬಿಸಿನೀರು ಅಥವಾ ಗಿಡಮೂಲಿಕೆಗಳಿಂದ ತಯಾರಿಸಿದ ಚಹಾ ಕುಡಿಯುವ ವೇಳೆ ಒಂದು ಚಮಚ ತೆಂಗಿನೆಣ್ಣೆಯನ್ನು ಸೇರಿಸಿ ಕುಡಿಯಬೇಕು. ಇದು ಇಷ್ಟವಿಲ್ಲ ಎನ್ನುವವರು ತರಕಾರಿಯ ಸಲಾಡ್ ಜೊತೆ ಸೇರಿಸಿಯೂ ಸೇವಿಸಬಹುದು.