
ವಿಜಯ್ ಕುಮಾರ್ ನಿರ್ದೇಶನದ ದುನಿಯಾ ವಿಜಯ್ ನಟನೆಯ ಬಹುನಿರೀಕ್ಷಿತ ‘ಭೀಮ’ ಚಿತ್ರದ ಫಸ್ಟ್ ಲುಕ್ ಟೀಸರ್ ಇದೇ ತಿಂಗಳು ಜನವರಿ 20ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಭೀಮಾ ಚಿತ್ರತಂಡ ಇಂದು ಅನೌನ್ಸ್ ಮಾಡಿದ್ದು ದುನಿಯಾ ವಿಜಯ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಕೃಷ್ಣ ಕ್ರಿಯೇಶನ್ಸ್ ಹಾಗೂ ಜಗದೀಶ್ ಫಿಲಂಸ್ ಬ್ಯಾನರ್ ನಡಿ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ಸಲಗ ಸಿನಿಮಾ ಬಳಿಕ ದುನಿಯಾ ವಿಜಯ್ ಇದೀಗ ಮತ್ತೊಮ್ಮೆ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
