ಆಚಾರ್ಯ ಚಾಣಕ್ಯ ಸಂತೋಷದ ಜೀವನಕ್ಕಾಗಿ ಹಲವು ಮಹತ್ವದ ವಿಷಯಗಳನ್ನು ಹೇಳಿದ್ದಾರೆ. ಈ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಒಬ್ಬ ವ್ಯಕ್ತಿಯು ಯಶಸ್ವಿ ಮತ್ತು ಸಂತೋಷದ ಜೀವನವನ್ನು ನಡೆಸಬಹುದು. ಒಂದು ವೇಳೆ ಚಾಣಕ್ಯ ಹೇಳಿದಂತೆ ನಡೆದುಕೊಳ್ಳದೆ ಹೋದರೆ ಜೀವನದಲ್ಲಿ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ.
ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಿರುವ ಒಂದು ಪ್ರಮುಖ ವಿಷಯವೆಂದರೆ ಯಾರನ್ನೂ ಎಂದಿಗೂ ಅವಮಾನಿಸಬಾರದು. ಅವಮಾನ ಮಾಡಿದ್ರೆ, ಮುಂದೊಂದು ದಿನ ಇದೇ ಅವಮಾನವನ್ನು ಆತ ಅನುಭವಿಸಬೇಕಾಗುತ್ತದೆ. ಆದ್ದರಿಂದ ಯಾರನ್ನಾದರೂ ನಿಂದಿಸಬಾರದು. ನಿಂದಿಸುವ ಮೊದಲು 100 ಬಾರಿ ಯೋಚಿಸಬೇಕು. ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯನ್ನು ಎಷ್ಟು ಬಾರಿಯಾದರೂ ಹೊಗಳಬಹುದು ಆದರೆ ಅವಮಾನ ಮಾಡಲೇಬಾರದು.
ಆಚಾರ್ಯ ಚಾಣಕ್ಯ ಹೇಳುವಂತೆ, ಅವಮಾನವು ನಿಂದನೀಯ ಪದಗಳಿಂದ ಮಾತ್ರವಲ್ಲ, ಮಾಡುವ ಕೆಲಸದಿಂದಲೂ ವ್ಯಕ್ತವಾಗುತ್ತದೆ. ಆದ್ದರಿಂದ ನಿಮ್ಮ ಮಾತಿನ ಜೊತೆಗೆ ನಿಮ್ಮ ಕಾರ್ಯಗಳ ಬಗ್ಗೆ ಕಾಳಜಿ ವಹಿಸಿ. ಇದನ್ನು ಹೊರತುಪಡಿಸಿ, ಯಾರನ್ನಾದರೂ ಅವಮಾನಿಸುವುದರಿಂದ ನಿಮ್ಮ ಇಮೇಜ್ ಹಾಳಾಗುತ್ತದೆ. ಆದ್ದರಿಂದ ಯಾರನ್ನೂ ತಿಳಿದೋ ತಿಳಿಯದೆಯೋ ಎಂದಿಗೂ ನಿಂದಿಸಬೇಡಿ, ಅವಮಾನಿಸಬೇಡಿ.