ಚಾಕ್ಲೇಟ್ ಅಂದ್ರೆ ಸಾಕು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ಸಿಹಿ ತಿನಿಸು. ಪ್ರತಿಯೊಬ್ಬರೂ ಚಾಕ್ಲೇಟ್ ಭಕ್ಷ್ಯಗಳನ್ನು ಇಷ್ಟಪಡುತ್ತಾರೆ. ಇವುಗಳಲ್ಲೊಂದು ಡಾರ್ಕ್ ಚಾಕ್ಲೇಟ್ ಕಾಫಿ. ಇದು ಟೇಸ್ಟಿ ಮತ್ತು ಆರೋಗ್ಯಕರವಾಗಿರುತ್ತದೆ. ಚಳಿಗಾಲದಲ್ಲಿ ಡಾರ್ಕ್ ಚಾಕ್ಲೇಟ್ ಕಾಫಿ ಕುಡಿಯುವುದು ಬಹಳ ಸೂಕ್ತ. ಇದು ಚಾಕೊಲೇಟ್‌ನ ಹೊಸ ರುಚಿಯ ಪಾನೀಯವಾಗಿದೆ. ಡಾರ್ಕ್ ಚಾಕ್ಲೇಟ್ ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುವ ಅನೇಕ ಗುಣಗಳನ್ನು ಹೊಂದಿದೆ. ಇದರೊಂದಿಗೆ ಡಾರ್ಕ್ ಚಾಕೊಲೇಟ್‌ನ ಪರಿಣಾಮವು ಬಿಸಿಯಾಗಿರುತ್ತದೆ, ಚಳಿಗಾಲದಲ್ಲಿ ಇದನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಆಂತರಿಕ ಶಾಖ ಸಿಗುತ್ತದೆ.
ಡಾರ್ಕ್ ಚಾಕ್ಲೇಟ್ ಕಾಫಿ ಮಾಡಲು ಬೇಕಾಗುವ ಸಾಮಾಗ್ರಿ: 2 ಕಪ್ ಹಾಲು, 2 ತುಂಡು ಡಾರ್ಕ್ ಚಾಕ್ಲೇಟ್, 1 ಟೀಸ್ಪೂನ್ ಕಾಫಿ ಪುಡಿ, 1/2 ಟೀಸ್ಪೂನ್ ಏಲಕ್ಕಿ ಪುಡಿ, 4 ಟೀಸ್ಪೂನ್ ಸಕ್ಕರೆ ಪುಡಿ, 4-5 ಐಸ್ ಕ್ಯೂಬ್ಸ್.
ಮಾಡುವ ವಿಧಾನ: ಡಾರ್ಕ್ ಚಾಕೊಲೇಟ್ ಕಾಫಿ ಮಾಡಲು ಮೊದಲು ಒಂದು ಪಾತ್ರೆಗೆ ಹಾಲನ್ನು ಸುರಿಯಿರಿ.ಅದನ್ನು ಮಧ್ಯಮ ಉರಿಯಲ್ಲಿ ಲಘುವಾಗಿ ಬಿಸಿ ಮಾಡಿ ಮತ್ತು ಗ್ಯಾಸ್ ಆಫ್ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಹಾಲು ಹಾಕಿಕೊಂಡು ಅದಕ್ಕೆ ಕಾಫಿ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಕನಿಷ್ಠ ಐದು ನಿಮಿಷಗಳ ಕಾಲ ಚಮಚದ ಸಹಾಯದಿಂದ ಹಾಲನ್ನು ಬೆರೆಸಿ.
ನಂತರ ಹಾಲನ್ನು ಮಿಕ್ಸರ್ ಜಾರ್ನಲ್ಲಿ ಹಾಕಿ ಮತ್ತು ಅದಕ್ಕೆ ಪುಡಿಮಾಡಿದ ಡಾರ್ಕ್ ಚಾಕೊಲೇಟ್ ಸೇರಿಸಿ. ಏಲಕ್ಕಿ ಪುಡಿ ಮತ್ತು ಸಕ್ಕರೆ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಮೂರ್ನಾಲ್ಕು ಐಸ್ ಕ್ಯೂಬ್ ಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಿಮ್ಮ ಡಾರ್ಕ್ ಚಾಕೊಲೇಟ್ ಕಾಫಿ ಸಿದ್ಧವಾಗುತ್ತದೆ. ಚಾಕ್ಲೇಟ್ ಕಾಫಿಯನ್ನು ಸರ್ವಿಂಗ್ ಗ್ಲಾಸ್‌ನಲ್ಲಿ ಸುರಿದು ಪುಡಿಮಾಡಿದ ಚಾಕೊಲೇಟ್‌ನಿಂದ ಅಲಂಕರಿಸಿದರೆ ಸವಿಯಲು ಸಿದ್ಧ.