ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್ ತಿನ್ನುವ ಮುನ್ನ ನಿಮಗಿದು ತಿಳಿದಿರಲಿ

ಡ್ರೈ ಫ್ರೂಟ್ಸ್‌ ಆರೋಗ್ಯಕ್ಕೆ ಪ್ರಯೋಜನಕಾರಿ ಅನ್ನೋದು ನಮಗೆಲ್ಲ ಗೊತ್ತಿದೆ. ಗೋಡಂಬಿ, ವಾಲ್‌ನಟ್, ಬಾದಾಮಿ ಮತ್ತು ಕಡಲೆಕಾಯಿ ಉಷ್ಣದ ಪರಿಣಾಮವನ್ನು ಹೊಂದಿವೆ. ಹಾಗಾಗಿ ಇವುಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ತಿನ್ನಲು ಸಲಹೆ ನೀಡಲಾಗುತ್ತದೆ. ಆದರೆ ಶೀತ ವಾತಾವರಣದಲ್ಲಿ ಅತಿಯಾಗಿ ಡ್ರೈಫ್ರೂಟ್ಸ್‌ ಸೇವನೆ ಕೂಡ ಅಪಾಯಕಾರಿ. ಇದು ಅನೇಕ ರೀತಿಯಲ್ಲಿ ದೇಹಕ್ಕೆ ಹಾನಿ ಮಾಡಬಹುದು.

ಹೆಚ್ಚಿನ ಕ್ಯಾಲೋರಿ ಡ್ರೈ ಫ್ರೂಟ್‌ಗಳಲ್ಲಿ ಆರೋಗ್ಯಕರ ಕೊಬ್ಬು ಕಂಡುಬಂದರೂ  ಕ್ಯಾಲೋರಿಗಳ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ.ಅದನ್ನು ಸೀಮಿತ ಪ್ರಮಾಣಕ್ಕಿಂತ ಹೆಚ್ಚು ಸೇವಿಸಿದರೆ ತೂಕ ಹೆಚ್ಚಾಗುವ ಅಪಾಯವಿರುತ್ತದೆ. ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಆಹಾರ ತಜ್ಞರ ಸಲಹೆಯನ್ನು ತೆಗೆದುಕೊಳ್ಳಬೇಕು.

ಹೆಚ್ಚಿನ ಸಕ್ಕರೆಒಣದ್ರಾಕ್ಷಿ ಮತ್ತು ಖರ್ಜೂರದಂತಹ ಡ್ರೈಫ್ರೂಟ್‌ಗಳು ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತವೆ. ಇವುಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಬಹುದು. ಮಧುಮೇಹಿಗಳು ಈ ಬಗ್ಗೆ ಕಾಳಜಿ ವಹಿಸಬೇಕು.

ಹೊಟ್ಟೆಯ ಸಮಸ್ಯೆ ಡ್ರೈಫ್ರೂಟ್‌ಗಳಲ್ಲಿ ಫೈಬರ್‌ ಅಂಶವಿರುತ್ತದೆ. ಇದು ಹೆಚ್ಚಿನ ಜನರಿಗೆ ಒಳ್ಳೆಯದು. ಆದರೆ ಕೆಲವರಿಗೆ ಇದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ವಾಸ್ತವವಾಗಿ ಕೆಲವೊಮ್ಮೆ ಅವುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಪರಿಣಾಮ ಮಲಬದ್ಧತೆ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read