ಘಮ ಘಮಿಸುವ ಏಲಕ್ಕಿಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಏಲಕ್ಕಿ ಘಮ ಪಾಯಸ ಮತ್ತು ಬಿರಿಯಾನಿಗೆ ಮಾತ್ರ ಸೀಮಿತವಲ್ಲ. ಅದು ಆರೋಗ್ಯದ ದೃಷ್ಟಿಯಿಂದಲೂ ಹಲವು ಪ್ರಯೋಜನಗಳನ್ನು ಮಾಡುತ್ತದೆ. ಹಸಿರು ಏಲಕ್ಕಿ ಸ್ವಲ್ಪ ದುಬಾರಿಯಾದರೂ ಪರಿಮಳ ಹೆಚ್ಚು. ಇದರಲ್ಲಿ ವಿವಿಧ ಖನಿಜಗಳು, ಕ್ಯಾಲ್ಸಿಯಂ, ಗಂಧಕ, ವಿಟಮಿನ್ ಮತ್ತು ವಿವಿಧ ಪೋಷಕಾಂಶಗಳು ಇರುತ್ತವೆ.

ರಕ್ತದಲ್ಲಿ ಇರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಿ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಹಲ್ಲಿನ ತೊಂದರೆ ಕಡಿಮೆ ಮಾಡುತ್ತದೆ. ಅಲ್ಲದೆ ಪರಿಮಳದ ಮೂಲಕ ರೋಗವನ್ನು ನಿವಾರಿಸುವ ವಿಧಾನವಾದ ಆರೋಮಪತಿಯಲ್ಲಿ ಏಲಕ್ಕಿಗೆ ಪ್ರಮುಖ ಸ್ಥಾನವಿದೆ. ಇದರ ಪರಿಮಳವನ್ನು ಹೀರುವುದರಿಂದ ಮನಸ್ಸು ನಿರಾಳ ಮತ್ತು ನಿರುದ್ವೇಗವಾಗುತ್ತದೆ.

ಮನೆಯಲ್ಲಿ ಸೊಳ್ಳೆ ನೊಣ ಇತ್ಯಾದಿ ಕೀಟಗಳ ಕಾಟವಿದ್ದರೆ ಏಲಕ್ಕಿ ಮಾಲೆಯನ್ನು ಮನೆಯ ಮೂಲೆಯಲ್ಲಿ ಇಟ್ಟರೆ ಸಾಕು ನಿಮ್ಮ ಮನೆಯಲ್ಲಿನ ಹುಳುಗಳು ನಿಯಂತ್ರಣಕ್ಕೆ ಬರುತ್ತವೆ. ಸಕ್ಕರೆ ಡಬ್ಬಕ್ಕೆ ಆಗಾಗ ಬರುವ ಇರುವೆಗೂ ಏಲಕ್ಕಿ ಮದ್ದಾಗುತ್ತದೆ.

ಇಡೀ ಏಲಕ್ಕಿಯನ್ನು ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಗಂಟಲು ಬೆನೆ, ಕೆಮ್ಮು ಕಡಿಮೆಯಾಗುತ್ತದೆ. ಜಠರದ ಉರಿಯನ್ನು ಇದು ಕಡಿಮೆ ಮಾಡುತ್ತದೆ. ಅಜೀರ್ಣ ಮಲಬದ್ಧತೆಗೂ ಏಲಕ್ಕಿ ಸೇವನೆ ಉತ್ತಮವಾದದ್ದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read