ಗಣೇಶ ಪ್ರತಿಷ್ಠಾಪಿಸುವವರಿಗೆ ಮುಖ್ಯ ಮಾಹಿತಿ: ಪೆಂಡಾಲ್ ಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವಂತಿಲ್ಲ

ಗಣೇಶ ಹಬ್ಬದ ಪ್ರಯುಕ್ತ ಗಣೇಶನ ವಿಗ್ರಹ ಪ್ರತಿಷ್ಠಾಪನೆಗೆ ಹಾಕುವ ಪೆಂಡಾಲ್‌ ಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಾರದು ಎಂದು ತಿಳಿಸಲಾಗಿದೆ.

ಯಾವುದೇ ಹೆಚ್‌ಟಿ ಮತ್ತು ಎಲ್‌ಟಿ ವಿದ್ಯುತ್ ಜಾಲಗಳ ಕೆಳಗೆ ಗಣೇಶ ಚತುರ್ಥಿಯ ಪೆಂಡಾಲ್ ನಿರ್ಮಿಸಬಾರದು. ವಿದ್ಯುತ್ ಕಂಬಗಳಿಗೆ ಅಥವಾ ಪರಿವರ್ತಕ ಕೇಂದ್ರದ ಕಂಬಗಳಿಗೆ ಶಾಮಿಯಾನ ಕಟ್ಟುವುದಾಗಲೀ ಅಥವಾ ಬ್ಯಾನರ್‌ಗಳನ್ನು ಕಟ್ಟುವುದಾಗಲೀ ಮಾಡಬಾರದು.

ಯಾವುದೇ ನಿಯಮಗಳ ಉಲ್ಲಂಘನೆಯ ವಿದ್ಯುತ್‌ ನಿಂದ ಆಗುವ ಅನಾಹುತಗಳಿಗೆ ಸಂಘಟನೆಯ ಮುಖ್ಯಸ್ಥರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

ಜೆಸ್ಕಾಂ ನಿಯಾಮನುಸಾರ ಅನುಮೋದನೆ ಪಡೆದು, ಅಧಿಕೃತ ವಿದ್ಯುತ್ ಸಂಪರ್ಕ ಪಡೆಯಬೇಕು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್‌ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read