ಪುರುಷರಿಗೆ ಇವತ್ತು ಮೀಟಿಂಗ್ ಇದೆ ಎಂದ ಬಳಿಕವೇ ಶೇವಿಂಗ್ ಮಾಡಬೇಕು ಎಂಬ ನೆನಪೂ ಕಾಡುತ್ತದೆ. ಗಡಿಬಿಡಿಯಲ್ಲಿ ಸ್ನಾನದ ಸಮಯದಲ್ಲೇ ಶೇವಿಂಗ್ ಅನ್ನೂ ಮುಗಿಸಿ ಬರುವ ಪುರುಷರೇ ಹೆಚ್ಚು. ಹೀಗಾಗಿ ಶೇವಿಂಗ್ ಮಾಡುವಾಗ ಈ ಕುರಿತಾಗಿ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ.
ಮೊದಲಿಗೆ ಬೇಗ ಮುಗಿಯಲಿ ಎಂಬ ಕಾರಣಕ್ಕೆ ಉಲ್ಟಾ ಶೇವಿಂಗ್ ಮಾಡುವ ಅಭ್ಯಾಸ ನಿಮಗಿದ್ದರೆ ಮೊದಲು ಅದನ್ನು ಬಿಟ್ಟು ಬಿಡಿ. ಇದರಿಂದ ತ್ವಚೆಯೂ ಹಾಳಾಗುತ್ತದೆ. ಚರ್ಮದ ಮೃದುತ್ವ ನಾಶವಾಗುತ್ತದೆ.
ಶೇವಿಂಗ್ ಮಾಡುವ ಮುನ್ನ ನಿಮ್ಮ ಗಡ್ಡವನ್ನು ಒದ್ದೆ ಮಾಡಿಕೊಳ್ಳಿ. ಇಲ್ಲದಿದ್ದರೆ ಶೇವ್ ಮಾಡಲು ಗಟ್ಟಿ ಎನಿಸಬಹುದು. ನೀರಿರುವಂತೆಯೇ ಶೇವ್ ಮಾಡಿ. ಇದರಿಂದ ಮೊಡವೆ ಸಮಸ್ಯೆಯೂ ದೂರವಾಗುತ್ತದೆ.
ಮೈಲ್ಡ್ ಶೇವಿಂಗ್ ಜೆಲ್ ಅಥವಾ ಸೋಪು ಹಚ್ಚಿಕೊಂಡ ಬಳಿಕ ಐದು ನಿಮಿಷ ಗ್ಯಾಪ್ ಬಿಡಿ. ಬಳಿಕವೇ ಶೇವ್ ಮಾಡಿ. ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ರೇಜರ್ ಕೊಳ್ಳಲು ಮರೆಯದಿರಿ. ಅದರ ಗುಣಮಟ್ಟವನ್ನೂ ಗಮನಿಸಿ.
ಶೇವಿಂಗ್ ಮಾಡಿ ಮುಗಿದ ಬಳಿಕ ಯಾವುದೇ ಕ್ರೀಮ್ ಅಥವಾ ಸೋಪು ಹಚ್ಚಿಕೊಳ್ಳುವುದು ಒಳ್ಳೆಯದಲ್ಲ. ಇದರಿಂದ ತ್ವಚೆಯಲ್ಲಿ ಸಣ್ಣ ಗುಳ್ಳೆಗಳು ಕಾಣಿಸಿಕೊಂಡಾವು, ಇಲ್ಲವೇ ತ್ವಚೆ ಉರಿದ ಅನುಭವವಾದೀತು.